ಮೈಸೂರು

ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಮಾರಂಭ ನ.12, 13ರಂದು

 ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಮೈಸೂರು ಇವರು ವಿಜಯವಾಣಿ ಪತ್ರಿಕೆಯ ಸಹಕಾರದೊಂದಿಗೆ ‘ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಮಾರಂಭ 1956-2016’ ಅನ್ನು ಹಮ್ಮಿಕೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ತಗಡೂರು ಗೌರಿಶಂಕರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಹೆಚ್.ಎಂ. ವಸಂತಮ್ಮ ಅವರನ್ನು ಗೌರವಪೂರ್ವಕವಾಗಿ ಸಮ್ಮತಿಸಿ, ಮಾತನಾಡಿದ ಅವರು ನ.12 ಮತ್ತು 13 ರಂದು ಶ್ರೀ ನಟರಾಜ ಕಾಲೇಜಿನ ಆವರಣದಲ್ಲಿ 2 ದಿನಗಳ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ರವೀಂದ್ರಕುಮಾರ್ ಮತ್ತು ಲೂರ್ದ್ ಮೇರಿ ದೇವರಾಜ್ ಅವರ ಸಾರಥ್ಯದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವವರು ರಂಗೋಲಿಗೆ ಬೇಕಾಗಿರುವ ಸಾಮಗ್ರಿಗಳನ್ನು ತಾವೇ ತರಬೇಕಾಗಿದೆ. ಭಾನುವಾರ ಮ.2 ಗಂಟೆಗೆ ಪದ್ಮಾವತಿ, ನಾಗರತ್ನ ಮತ್ತು ನಾರಾಯಣಸ್ವಾಮಿ ಅವರ ಸಾರಥ್ಯದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸುವವರು 2 ಕವನಗಳನ್ನು ಮಾತ್ರ ವಾಚಿಸಬಹುದಾಗಿದೆ. ಎರಡು ಸಂದರ್ಭಗಳಲ್ಲಿ ಭಾಗವಿಸುವ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಅಲ್ಲದೇ ಕೀರ್ತಿಶೇಷ ಕೆ.ಸಿ.ರೆಡ್ಡಿ ವೇದಿಕೆ ಮತ್ತು ಸ್ವಾತಂತ್ರಯ ಸೇನಾನಿ ಸಾರ್ವಜನಿಕ ತಗಡೂರು ಸುಬ್ಬಣ್ಣ ವೇದಿಕೆಯಲ್ಲಿ ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದ್ದು, ಅತಿಥಿ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಗೀತಾ ಗಣೇಶ್, ವಸಂತಮ್ಮ, ದ್ಯಾವಪ್ಪ ನಾಯಕ, ಟಿ.ಮಹದೇವಸ್ವಾಮಿ, ವೆಂಕಟೇಶ್ ಹಾಜರಿದ್ದರು.

Leave a Reply

comments

Related Articles

error: