ದೇಶ

ಅಕ್ಟೋಬರ್ 1ರಿಂದ ಎಸ್ ಬಿಐ ಬ್ಯಾಂಕ್ ಉಳಿತಾಯ ಖಾತೆಗೆ ಹೊಸ ನಿಯಮ

ದೇಶ(ನವದೆಹಲಿ)ಸೆ.29:- ಅಕ್ಟೋಬರ್ ಒಂದರಿಂದ ಬಹಳಷ್ಟು ಬದಲಾವಣೆಗಳು ಕಾದಿವೆ. ಅದು ನಮ್ಮ ಮತ್ತು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಬದಲಾವಣೆಗಳಾಗಿದೆ. ಎಸ್ ಬಿಐ  ಬ್ಯಾಂಕ್ ಉಳಿತಾಯ ಖಾತೆಗೆ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ.

ಕರೆ ದರಗಳ ಕುರಿತೂ ಒಳ್ಳೆಯ ಸುದ್ದಿಗಳಿವೆ. ಎಸ್ ಬಿಐನಲ್ಲಿ ವಿಲೀನಗೊಂಡ ಅಸೋಸಿಯೇಟ್ ಬ್ಯಾಂಕ್ ಗಳ ಚೆಕ್ ಗಳನ್ನು ಹೊಂದಿದ್ದರೆ ಶುಭ ಸುದ್ದಿ ನಿಮ್ಮ ಉಪಯೋಗಕ್ಕೆ ಬರಲಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಈಗ ನಾವು 5000 ಬದಲು 3000ರೂ.ಗಳನ್ನು ಇಟ್ಟುಕೊಳ್ಳಬಹುದು. ಈ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

ಎಸ್ ಬಿಐ ನ ಖಾತೆಯನ್ನು ಸ್ಥಗಿತಗೊಳಿಸಲು ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಅಕ್ಟೋಬರ್ 1ರಿಂದ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ ಈ ಸೌಲಭ್ಯ ಖಾತೆ ತೆರೆಯುವ ಕನಿಷ್ಠ 14ದಿನಗಳು ಮತ್ತು ಮತ್ತು ಖಾತೆಯನ್ನು ಮುಚ್ಚುವ ಒಂದು ವರ್ಷದ ನಂತರ ಲಭ್ಯವಿದೆ. 15ದಿನದ ನಂತರ ಅಥವಾ ಒಂದು ವರ್ಷದೊಳಗೆ ಸ್ಥಗಿತಗೊಳಿಸಲು 500ರೂ ಮತ್ತು  ಜಿಎಸ್ ಟಿ ತಗುಲಲಿದೆ.

ಅಕ್ಟೋಬರ್ 1ರಿಂದ ಕರೆಯ ದರಗಳು ಕಡಿಮೆಯಾಗಲಿವೆ. ಯಾಕೆಂದರೆ ಅ.1ರಿಂದ ಅಂತರ್ ಸಂಪರ್ಕ ಶುಲ್ಕವನ್ನು ಕಡಿಮೆಗೊಳಿಸುತ್ತಿದೆ. ಇದು ಕರೆದರಗಳನ್ನು ಕಡಿಮೆಮಾಡಲಿದ್ದು,  ಇದರಿಂದ ಕರೆ ದರಗಳು ಅಗ್ಗವಾಗಲಿದೆ. ಅಂಗಡಿಯವರು ಅ.1ರಿಂದ ಅಂಗಡಿಯವರು ಹಳೆಯ ಎಂಆರ್ ಪಿನಲ್ಲಿಯೇ ಯಾವುದೇ ಸರಕುಗಳನ್ನು ಮಾರಾಟ ಮಾಡಬಾರದು. ಅ.1ರಿಂದ ಎಲ್ಲಾ ಅಂಗಡಿಯವರೂ ಸರಕುಗಳಿಗೆ ಹೊಸ ಎಂ.ಆರ್.ಪಿಯೊಂದಿಗೆ ಮಾರಬೇಕಾಗುತ್ತದೆ. ಮಾಡದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಳೆಯ ಎಂ.ಆರ್.ಪಿ ಸರಕುಗಳನ್ನು ಮಾರಾಟ ಮಾಡಲು ಕೊನೆಯ ದಿನಾಂಕವನ್ನು ಸೆ.30ರವರೆಗೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. (ಎಸ್.ಎಚ್)

Leave a Reply

comments

Related Articles

error: