ಮೈಸೂರು

ಜನರ ಕಂಗೆಡಿಸಿದ ಅಲ್‍ಝೈಮರ್ಸ್ ಕಾಯಿಲೆ: ಪ್ರೊ. ರಂಗಪ್ಪ

ಪ್ರಸ್ತುತ ಕಾಲಘಟ್ಟದಲ್ಲಿ ಅಲ್‍ಝೈಮರ್ಸ್‍, ಕ್ಯಾನ್ಸರ್, ಮಧುಮೇಹ, ಉರಿಯೂತ, ಹೃದಯಸಂಬಂಧಿ ರೋಗಗಳು ಜನರನ್ನು ಕಂಗೆಡಿಸಿವೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.

ಶತಮಾನೋತ್ಸವ ಆಚರಣೆಯಂಗವಾಗಿ ಮೈಸೂರು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅಲ್‍ಝೈಮರ್ಸ್ ಕಾಯಿಲೆ ಮತ್ತು ಕ್ಯಾನ್ಸರ್: ವಯಸ್ಸಾದ ಮೇಲೆ ಬರುವ ರೋಗಕ್ಕೆ ಹಳೆಯ ಪರಿಹಾರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನರಗಳ ಶಕ್ತಿ ಕಡಿಮೆಗೊಂಡು ಕಾಣಿಸಿಕೊಳ್ಳುವ ಅಲ್‍ಝೈಮರ್ಸ್ ಕಾಯಿಲೆಯು 40ರಿಂದ 50 ವಯಸ್ಸಿನವರಿಗೆ ಬಾಧಿಸುತ್ತದೆ. ನೆನಪಿನ ಶಕ್ತಿ ಕುಂಠಿತ, ಆಲೋಚನಾ ಶಕ್ತಿ ಕಳೆದುಕೊಳ್ಳುವುದು, ಮಾತಿನಲ್ಲಿ ಅಸ್ಪಷ್ಟತೆ, ಅಸಹಾಯಕತೆ ಈ ರೋಗದ ಪ್ರಮುಖ ಲಕ್ಷಣಗಳು. ಅಲ್‍ಝೈಮರ್ಸ್ ಕಾಯಿಲೆಯು ನರಸಂವಾಹಕಗಳ ಚಟುವಟಿಕೆಗೆ ಅಡ್ಡಿಯುಂಟು ಮಾಡುವುದಲ್ಲದೆ, ನರ ಜೀವಕೋಶದ ಸಾವು ಮತ್ತು ಮೆದುಳಿನ ಅಂಗಾಂಶ ನಷ್ಟಕ್ಕೆ ಕಾರಣವಾಗುತ್ತದೆ.

ಅಲ್‌ಝೈಮರ್‌‌ನ ಕಾಯಿಲೆಯು ಒಂದು ಪ್ರೋಟೀನಿನ ತಪ್ಪುಮಡಿಕೆ ಕಾಯಿಲೆಯಾಗಿ (ಪ್ರೋಟಿಯೋಪತಿ) ಗುರುತಿಸಲ್ಪಟ್ಟಿದ್ದು, ಅತಿರೇಕವಾಗಿ ಮಡಿಸಲ್ಪಟ್ಟ A-ಬೀಟಾ ಮತ್ತು ಟೌ ಪ್ರೋಟೀನುಗಳು ಮಿದುಳಿನಲ್ಲಿ ಜಮಾವಣೆಯಾಗುವುದರಿಂದ ಅದು ಉಂಟಾಗುತ್ತದೆ ಎಂದು ಹೇಳಿದರು.

ಬಳಿಕ ಅಲ್‍ಝೈಮರಸ್ ಕಾಯಿಲೆ ಮತ್ತು ಕ್ಯಾನ್ಸರ್ ತಡೆಗಟ್ಟಲು ಬಳಸಬಹುದಾದ ಔಷಧದ ಬಗ್ಗೆ ಮಾಹಿತಿ ನೀಡಿದರು.

ಐಐಎಸ್‍ಸಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಜೆ. ರಾವ್, ವಿವಿ ಕುಲಸಚಿವ ರಾಜಣ್ಣ ಮತ್ತು ಇತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: