ಮೈಸೂರು

ನೆಲೆ ಹಿನ್ನೆಲೆ ಸಂಸ್ಥೆ ವತಿಯಿಂದ ರಂಗಸಂಸ್ಕೃತಿ-2016

ನೆಲೆ ಹಿನ್ನೆಲೆ ಸಾಂಸ್ಕೃತಿಕ ಸಂಸ್ಥೆಯು ‘ಉಳುವಯೋಗಿ’ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಲಹಾ ಸಮಿತಿಯ ಸದಸ್ಯ ಪ್ರೊ.ಕೆ.ಸಿ.ಬಸವರಾಜು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು, ನವೆಂಬರ್ 10 ರಿಂದ ರೈತರ ಬದುಕಿಗೆ ಸಂಬಂಧಿಸಿದಂತೆ ಯುವ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ತಿಂಗಳ ರಂಗ ತರಬೇತಿ ಶಿಬಿರ, ಮೂರು ದಿನದ ನಾಟಕೋತ್ಸವ, ಬೀದಿ ನಾಟಕ ಮತ್ತು ಕಾರ್ಯಾಗಾರ, ರೈತ ಚಲನಚಿತ್ರೋತ್ಸವ, ರೈತರ ಸಂತೆ, ಒಕ್ಕಲು ಗೀತೆಗಳು, ಕೃಷಿ ಪರಿಕರಗಳು ಮತ್ತು ಚಿತ್ರಕಲಾ ವಸ್ತು ಪ್ರದರ್ಶನ ಇಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನೆಲೆ ಹಿನ್ನೆಲೆ ಸಂಸ್ಥೆಯ ನಿರ್ದೇಶಕ ಕೆ.ಎಂ.ಗೋಪಾಲಕೃಷ್ಣ, ಲಕ್ಷ್ಮಣ್ ಹೊಸಕೋಟೆ, ಹೊಸೂರು ಕುಮಾರ್ ಹಾಜರಿದ್ದರು.

Leave a Reply

comments

Related Articles

error: