ದೇಶ

ಜಯಲಲಿತಾ ಆರೋಗ್ಯದಲ್ಲಿ ಸುಧಾರಣೆ: ಶೀಘ್ರದಲ್ಲಿ ಖಾಸಗಿ ಕೊಠಡಿಗೆ ಸ್ಥಳಾಂತರ

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರನ್ನು ಶೀಘ್ರದಲ್ಲೇ ತೀವ್ರ ನಿಗಾ ಘಟಕ (ಸಿಸಿಯು)ದಿಂದ ಖಾಸಗಿ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಎಐಎಡಿಎಂಕೆ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ, ಉಸಿರಾಟದ ಸಮಸ್ಯೆಯು ನಿವಾರಣೆಯಾಗಿದೆ. ಹೀಗಾಗಿ ಕೃತಕ ಉಸಿರಾಟವನ್ನು ಆಗಾಗ ತೆಗೆಯಲಾಗುತ್ತಿದೆ ಎಂದು ಎಐಎಡಿಎಂಕೆ ವಕ್ತಾರ ಸಿ.ಪೊನ್ನೈಯನ್ ಅವರು ಹೇಳಿರುವುದಾಗಿ ಐಎಎನ್‍ಎಸ್‍ ವರದಿ ಮಾಡಿದೆ.

ಕಳೆದ ಸೆಪ್ಟೆಂಬರ್ 22ರಂದು ಜಯಲಲಿತಾ ಅವರು ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ. ಕಳೆದ ಒಂದು ವಾರದಿಂದ ಅವರು ಸ್ವಲ್ಪ ಗಟ್ಟಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಪೊನ್ನೈಯನ್ ತಿಳಿಸಿದ್ದಾರೆ.

Leave a Reply

comments

Related Articles

error: