ಮೈಸೂರು

ಹೆಲಿಕಾಪ್ಟರ್ ಗೆ ಹಕ್ಕಿ ಡಿಕ್ಕಿ : ಗಾಜು ಪುಡಿ ಪುಡಿ

ಮೈಸೂರು,ಅ.1:- ದಸರಾ ಜಾಲಿ ಹೆಲಿ ರೈಡ್ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಗೆ ಹಕ್ಕಿ ಡಿಕ್ಕಿಯಾಗಿದ್ದು, ಹೆಲಿಕಾಪ್ಟರ್ ನ ಗಾಜು ಪುಡಿ ಪುಡಿಯಾಗಿದ ಘಟನೆ  ಭಾನುವಾರ ನಡೆದಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್ ಬಳಿ ಘಟನೆ ನಡೆದಿದ್ದು, ಪೈಲಟ್ ಮೇಲೆ ಹಕ್ಕಿಯ ರಕ್ತ ಚೆಲ್ಲಿದ್ದು, ಫೈಲಟ್ ನ ಸಮಯ ಪ್ರಜ್ಞೆಯಿಂದ  ಭಾರೀ ಅನಾಹುತ ತಪ್ಪಿದ್ದು, ಹೆಲಿಕಾಪ್ಟರ್ ನಲ್ಲಿ ಕುಳಿತಿದ್ದ ಪ್ರಯಾಣಿಕರಲ್ಲಿ ಆತಂಕ ನಿರ್ಮಾಣವಾಗಿತ್ತು. ಹೆಲಿಕಾಪ್ಟರ್ ನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: