ಮೈಸೂರು

ಅ.3-8: ಅಂತಾರಾಷ್ಟ್ರೀಯ ಯೋಗ ಪರಂಪರೋತ್ಸವ

ಮೈಸೂರು,ಅ.1:- ಅಂತಾರಾಷ್ಟ್ರೀಯ ಯೋಗ ಪರಂಪರೋತ್ಸವ ಸುತ್ತೂರು ಮಠದಲ್ಲಿ ಅಕ್ಟೋಬರ್‌ 3 ರಿಂದ 8ರವರೆಗೆ ನಡೆಲಿದೆ ಎಂದು ಯೋಗಗುರು ವಚನಾನಂದ ಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ  ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ವಾಸ ಸಂಸ್ಥೆ, ಯೋಗಿಕ್ ಹೆರಿಟೇಜ್ ಮತ್ತು ಎಸ್ಎಂಪಿ ಫೌಂಡೇಶನ್ ವತಿಯಿಂದ  ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿರುವ  ಸುತ್ತೂರು ಮಠದಲ್ಲಿ ಯೋಗ ಪರಂಪರೋತ್ಸವ ಆಯೋಜಿಸಲಾಗಿದ್ದು, ಒಂದುವಾರಗಳ ಕಾಲ ಯೋಗ ಪ್ರದರ್ಶನ ನಡೆಯಲಿದೆ. ಯೋಗೋತ್ಸವದಲ್ಲಿ ಅಂತಾರಾಷ್ಟ್ರೀಯ ಯೋಗಪಟುಗಳು, ಯೋಗ ಸಾಧಕರು, ಕಾಶ್ಮೀರದ ಯೋಗ ಜ್ಞಾನಿಗಳ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಎಂಪಿ ಫೌಂಡೇಶನ್ ಆಧ್ಯಕ್ಷ ಶಿವಶಂಕರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: