ಸುದ್ದಿ ಸಂಕ್ಷಿಪ್ತ

ಉಚಿತ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ

ರಿಜಿಗ್ ಅಕಾಡೆಮಿ ಇವರು ಕ್ರೋಮ್ ಕ್ರಿಯೇಟಿವ್ ಸ್ಟುಡಿಯೊ ಇವರ ಸಹಯೋಗದೊಂದಿಗೆ ‘ಆಧ್ಯಾತ್ಮದ ಮೂಲಕ ವ್ಯಕ್ತಿತ್ವ’ ಉಚಿತ ಕಾರ್ಯಗಾರವನ್ನು ನ.6ರ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ನಾರಾಯಣ ಶಾಸ್ತ್ರಿ ರಸ್ತೆಯ ರಾಘವೇಂದ್ರಸ್ವಾಮಿ ಮಠದ ಎದುರಿನ ಮೊದಲ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಉತ್ತಮ ವ್ಯಕ್ತಿತ್ವ, ಮಕ್ಕಳ ಶೈಕ್ಷಣಿಕ ಸುಧಾರಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ತರಬೇತುದಾರ ಶ್ರೀನಿ ತಿಳಿಸಲಿದ್ದಾರೆ. 12 ವರ್ಷ ಮೇಲ್ಪಟ್ಟ ಮಕ್ಕಳು ಹಾಗೂ ಪೋಷಕರು ಭಾಗವಹಿಸಬಹುದು, ಉಚಿತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9945236173 ಮತ್ತು 082104004005ಗೆ ಕರೆ ಮಾಡಬಹುದು.

Leave a Reply

comments

Related Articles

error: