ಮೈಸೂರು

ಬೈಕ್ ಗೆ ಖಾಸಗಿ ಬಸ್ ಡಿಕ್ಕಿ : ಮಹಿಳೆ ಸಾವು

ಮೈಸೂರು,ಅ.2:- ಮೈಸೂರು ಗದ್ದಿಗೆ ಮುಖ್ಯರಸ್ತೆಯ ಬಳಿ  ಬೈಕ್ ಗೆ  ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ , ಬೈಕ್ ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಬೆಟ್ಟದಬೀಡು ನಿವಾಸಿ ಬಿಲ್ ಕಲೆಕ್ಟರ್ ಪತ್ನಿ ಜ್ಯೋತಿ(28)ಎಂದು ಗುರುತಿಸಲಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಕಣಿಯನ ಹುಂಡಿ ಗೇಟ್ ಬಳಿ ನಡೆದಿದೆ. ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಜ್ಯೋತಿ ಸಾವನ್ನಪ್ಪಿದ್ದು ಆಕೆಯ ಪತಿ ಸೋಮಶೇಖರ್ ಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹಂಪಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: