ದೇಶಪ್ರಮುಖ ಸುದ್ದಿ

ಗ್ಯಾಸ್ ಸಿಲಿಂಡರ್‍ ಹೊತ್ತ ಲಾರಿ-ಬಸ್‍ ನಡುವೆ ಢಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

ಕರ್ನೂಲ್ (ಆಂಧ್ರಪ್ರದೇಶ) ಅ.2 : ಗ್ಯಾಸ್ ಸಿಲಿಂಡರ್‍ ಹೊತ್ತ ಲಾರಿ ಮತ್ತು ಬಸ್‍ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‍ ಸಿಲಿಂಡರ್`ಗಳನ್ನು ಹೊತ್ತು ಸಾಗುತ್ತಿದ್ದ ಲಾರಿಗೆ ಧೋನೆ ಎಂಬಲ್ಲಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸಿಲಿಂಡರ್‍ಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕರ್ನಾಟಕದ ಕಡೆಯಿಂದ ಬರುತ್ತಿದ್ದ ಬಸ್ ಲಾರಿಗೆ ಢಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿದೆ ಎಂದು ತಿಳಿದು ಬಂದಿದ್ದು, ಬಸ್‍ ಚಾಲಕ ಮತ್ತು ಇತರ ಮೂರು ಮಂದಿ ತೀವ್ರವಾಗಿ ಗಾಯಗೊಂಡು, ಓರ್ವ ವ್ಯಕ್ತಿ ಮೃತಪಟ್ಟಪನೆಂದು ಸ್ಥಳೀಯರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಕರ್ನೂಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಾಗಿಸಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

(ಎನ್.ಬಿ)

Leave a Reply

comments

Related Articles

error: