ಮೈಸೂರು

ಗಾಂಧಿ ಜಯಂತಿ – ಬನ್ನೂರು ರೋಟರಿ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ

ಮೈಸೂರು, (ಬನ್ನೂರು) ಅ.2 : ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪುರಾತನ ಶ್ರೀಕ್ಷೇತ್ರ ಆನಂದವಲ್ಲಿ ಹನುಮಂತೇಶ್ವರ ದೇವಸ್ಥಾನ ಆವರಣದ ಸ್ವಚ್ಚತಾ ಕಾರ್ಯಕ್ರಮವನ್ನು ಬನ್ನೂರಿನ ರೋಟರಿ ಸಂಸ್ಥೆಯವರು ಹಮ್ಮಿಕೊಂಡಿದ್ದರು.

ದೇವಸ್ಥಾನದ ಆವರಣದಲ್ಲಿರುವ ಗಿರಿಜಾ ಕಲ್ಯಾಣ ಮಂಟಪದ ಮೇಲ್ಚಾವಣಿಯಲ್ಲಿ ಬೆಳೆದಿದ್ದ  ಗಿಡಗಂಟೆ ಹಾಗೂ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ರೋಟರಿ ಅಧ್ಯಕ್ಷ ಬಿ.ಎಸ್.ಯೋಗೇಂದ್ರ, ಉಪಾಧ್ಯಕ್ಷ ಕೆ.ಮಹೇಂದ್ರ ಸಿಂಗ್ ಕಾಳಪ್ಪ ಹಾಗೂ ಕಾರ್ಯದರ್ಶಿ  ವೈ.ಎಚ್. .ಹನುಮಂತೇಗೌಡ ನೇತೃತ್ವದಲ್ಲಿ ನಡೆಸಿದ ಸ್ವಚ್ಚತಾ ಅಭಿಯಾನದಲ್ಲಿ ಸುಮಾರು 16ಕ್ಕೂ ಹೆಚ್ಚು ರೋಟರಿ ಸದಸ್ಯರು ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: