ಮೈಸೂರು

ಆನೆಗಳಿಗೆ ಕಬ್ಬು, ಬೆಲ್ಲ, ಬಾಳೆಹಣ್ಣು ವಿತರಣೆ

ಮೈಸೂರು, ಅ.೨: ವಿಶ್ವ ವಿಖ್ಯಾತ ದಸರಾದ ಪ್ರಮುಖ ಆಕರ್ಷಣೆ ಅಂಬಾರಿಯನ್ನು ಹೂತ್ತು ನಾಡಹಬ್ಬವನ್ನು ಯಶಸ್ವಿಗೊಳಿಸಿದ ಗಜಪಡೆಯ ಕ್ಯಾಪ್ಟನ್ ಅರ್ಜುನ ಮತ್ತು ತಂಡದ ಇತರ ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಲಾಯಿತು.
ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಹೆಚ್.ಜಿ.ಗಿರಿಧರ ಅವರು ಅರ್ಜುನನಿಗೆ ಕಬ್ಬು, ಬೆಲ್ಲ ಬಾಳೆ ಹಣ್ಣು ತಿನ್ನಿಸಿದರು. ಈ ವೇಳೆ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವ ವಿಶ್ವವಿಖ್ಯಾತಿಗಳಿಸಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಗಜಪಡೆ ಯಶಸ್ವಿಗೊಳಿಸಿದೆ. ಅರ್ಜುನ ೬ನೇ ಬಾರಿ ಅಂಬಾರಿ ಹೊತ್ತು ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಅಂತೆಯೇ ಮುಂದೆಯೂ ಅರ್ಜುನನೇ ಅಂಬಾರಿ ಹೊರಲಿ. ಎಲ್ಲಾ ಆನೆಗಳು ಶಕ್ತಿಯುತವಾಗಿ, ಆರೋಗ್ಯಯುತವಾಗಿರಲಿ ಎಂದು ಹೇಳಿದರು.
ಉದ್ಯಮಿ ಸಂದೀಪ್ ನಾಯಕ್, ವಿಜಯ್ ಕುಮಾರ್, ವಿಕ್ರಂ ಅಯ್ಯಂಗಾರ್, ಶ್ರೀಕಾಂತ್ ಕಶ್ಯಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: