ಕರ್ನಾಟಕಪ್ರಮುಖ ಸುದ್ದಿ

ಶ್ರೀರಂಗಪಟ್ಟಣದಲ್ಲಿ ರಾಜರ ಕಾಲದ ಸುರಂಗ ಮಾರ್ಗ ಪತ್ತೆ

ಶ್ರೀರಂಗಪಟ್ಟಣ, ಅ.3 : ಶ್ರೀರಂಗಪಟ್ಟಣದಲ್ಲಿ ರಾಜರ ಕಾಲದ ಸುರಂಗ ಮಾರ್ಗವೊಂದು ಪತ್ತೆಯಾಗಿದೆ. ಇಲ್ಲಿನ ಕೊಳದಗುಡಿ ಬೀದಿಯ ಶಶಿಕುಮಾರ್ ಎಂಬುವರಿಗೆ ಸೇರಿದ ಶಿಥಿಲಾವಸ್ಥೆಗೆ ತಲುಪಿದ್ದ ಮನೆಯ ಒಳಭಾಗದಲ್ಲಿ ಈ ಸುರಂಗ ಮಾರ್ಗ ಪತ್ತೆಯಾಗಿದ್ದು, ಸುತ್ತಮುತ್ತಲ ಜನರು ಸ್ಥಳಕ್ಕೆ ಆಗಮಿಸಿ ಕುತೂಹಲದಿಂದ ನೋಡುತ್ತಿದ್ದಾರೆ. ಚುಕ್ಕಿಗಾರೆ ಹಾಗೂ ಇಟ್ಟಿಗೆಗಳನ್ನು ಬಳಸಿ ನೆಲದೊಳಗೆ ನಿರ್ಮಿಸಲಾಗಿರುವ ಈ ಸುರಂಗಮಾರ್ಗದಲ್ಲಿ ಸುಮಾರು ದೂರದವರೆಗೂ ಬೆಳಕು ಕಾಣುತ್ತದೆ.

ಸುರಂಗವು ಸುಮಾರು 12 ರಿಂದ 13 ಅಡಿಯಷ್ಟು ಆಳವಿದ್ದು, 20 ಮೀಟರ್ ಉದ್ದವಿದೆ. ಮೂರು ಜನರು ಒಟ್ಟಾಗಿ ಹೋಗುವಷ್ಟು ಜಾಗವಿದೆ. ಈ ಸುರಂಗ ನಿರ್ದಿಷ್ಟವಾಗಿ ಯಾವ ಕಾಲದಲ್ಲಿ ನಿರ್ಮಾಣವಾಗಿದೆ, ಎಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುವುದು ತಿಳಿದಿಲ್ಲ.

(ಎನ್‍.ಬಿ)

Leave a Reply

comments

Related Articles

error: