ದೇಶಪ್ರಮುಖ ಸುದ್ದಿ

ಆಸ್ತಿ ವಿಚಾರ: ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ ಸುಪ್ರೀಂ ಕೋರ್ಟ್

ನವದೆಹಲಿ,ಅ.3-ಹಿಂದೂ ಉತ್ತರಾಧಿಕಾರ ಕಾಯಿದೆ ಅಡಿಯಲ್ಲಿ ಆಸ್ತಿ ಯಾರ ವಶಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಜಿಲ್ಲಾಧಿಕಾರಿ ಸರ್ಕಾರದ ಅಧಿಕಾರಿ. ಆಸ್ತಿ ವಿವಾದ ಪರಿಹರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿ ಸೇರಿ ಸರ್ಕಾರದ ಆಡಳಿತ ನಿರ್ವಹಣೆಯ ಹೊಣೆ ಇರುವ ಅಧಿಕಾರಿಗಳಿಗೆ ನೀಡುವುದು ಕಾನೂನು ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಆಸ್ತಿ ವಿವಾದಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ನಿರ್ದಿಷ್ಟ ಅಧಿಕಾರ ಇದೆ ಎಂದು ಸ್ಪಷ್ಟವಾಗಿ ಕಾನೂನಿನಲ್ಲಿ ಉಲ್ಲೇಖಿಸಿದ್ದರೆ ಮಾತ್ರ ಆ ಅಧಿಕಾರವನ್ನು ಜಿಲ್ಲಾಧಿಕಾರಿ ಚಲಾಯಿಸಬಹುದು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಚಂದ್ರಚೂಡ ಅವರ ಪೀಠ ಅಭಿಪ್ರಾಯಪಟ್ಟಿದೆ.

ಹರಿದ್ವಾರದ ಕುಚಿಲಾಲ್ ರಾಮೇಶ್ವರ್ ಆಶ್ರಮ ಟ್ರಸ್ಟ್ ಗೆ ಉತ್ತರಾಧಿಕಾರಿಗಳಿಲ್ಲ ಎಂಬ ಕಾರಣದಿಂದ ಟ್ರಸ್ಟ್ ನ ಆಸ್ತಿಯನ್ನು ಹರಿದ್ವಾರದ ಜಿಲ್ಲಾಧಿಕಾರಿ ಸರ್ಕಾರದ ವಶಕ್ಕೆ ಪಡೆದಿದ್ದರು. ಈ ಆದೇಶವನ್ನು ಉತ್ತರಾಖಂಡ ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೀಗ ಈ ಎರಡು ಆದೇಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: