ದೇಶ

ಬಿಎಸ್ಪಿ ನಾಯಕ ರಾಜೇಶ್ ಯಾದವ್ ಹತ್ಯೆ

ದೇಶ(ನವದೆಹಲಿ)ಅ.2:-  ಬಿಎಸ್ಪಿ ನಾಯಕ ರಾಜೇಶ್ ಯಾದವ್ ಅವರನ್ನು ಸೋಮವಾರ ರಾತ್ರಿ ಅಲಹಾಬಾದ್  ವಿಶ್ವವಿದ್ಯಾಲಯದ ತಾರಾ ಚಂದ್ರೋ ಹಾಸ್ಟೇಲ್ ಬಳಿ ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದಾರೆ.

ರಾಜೇಶ್ ಯಾದವ್ ತನ್ನ ಸ್ನೇಹಿತ ಡಾ.ಮುಕುಲ್ ಸಿಂಗ್ ಅವರೊಂದಿಗೆ ಫಾರ್ಚ್ಯೂನರ್ ನಿಂದ ತಾರಾಚಂದ್ ಹಾಸ್ಟೇಲ್ ಗೆ ತೆರಳಿದ್ದರು. ಭದೋಹಿಯ ದುಗುನಾ ಗ್ರಾಮದ ನಿವಾಸಿ ರಾಜೇಶ್ ಯಾದವ್ 2017 ರಲ್ಲಿ ಜ್ಞಾನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಎಸ್ಪಿಯ ಉಸ್ತುವಾರಿ ವಹಿಸಿಕೊಂಡಿದ್ದರು.

ಬಿಎಸ್ಪಿ ನಾಯಕನ ಕತ್ಯೆಯ ವರದಿ ತಿಳಿಯುತ್ತಲೇ ಕಾರ್ಯಕರ್ತರು ಆಕ್ರೋಶಗೊಂಡರಲ್ಲದೇ ಪೊಲೀಸರ ವಿರುದ್ಧ ಸಿಡಿದೆದ್ದರು. ಹರಿತಕುಂಜ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಅವರು ನರ್ಸಿಂಗ್ ಹೋಂ ಮಾಲಿಕ ಡಾ.ಮುಕುಲ್ ಜೊತೆ ತಾರಾಚಂದ್ ಹಾಸ್ಟೇಲ್ ಗೆ ಯಾರನ್ನೋ ಭೇಟಿಯಾಗಲು ತೆರಳಿದ್ದರು. ರಾತ್ರಿ 2.30ರ ಸುಮಾರಿಗೆ ಹಾಸ್ಟೇಲ್ ಹೊರಗಡೆ ಯಾರ ಜೊತೆಯೋ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಅವರ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: