ಮೈಸೂರು

ದಲಿತರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ವಿಫಲರಾಗಿದ್ದೇವೆ: ಪ್ರೊ. ಅರವಿಂದ ಮಾಲಗತ್ತಿ ವಿಷಾದ

ರಾಜ್ಯದಲ್ಲಿ ದಲಿತರು ಅತಿಹೆಚ್ಚು ಸಂಖ್ಯೆಯಲ್ಲಿದ್ದರೂ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ವಿಫಲರಾಗಿದ್ದೇವೆ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಪುರಭವನದಲ್ಲಿ ವಿಶ್ವಮೈತ್ರಿ ಬುದ್ಧವಿಹಾರ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದಲಿತ ರಾಜಕಾರಣದ ವಿಫಲತೆ ಮತ್ತು ಸ್ವಾಭಿಮಾನಿ ಪರ್ಯಾಯ ರಾಜಕಾರಣದ ಕುರಿತು ಪ್ರೊ. ಅರವಿಂದ ಮಾಲಗತ್ತಿ ಅವರು ಮಾತನಾಡಿದರು.

ರಾಜ್ಯದಲ್ಲಿ ದಲಿತರು ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಬೃಹತ್ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಯಶಸ್ಸು ಕಾಣುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ದಲಿತರಿದ್ದರೂ ಕರ್ನಾಟಕದಲ್ಲಿ ದಲಿತ ರಾಜಕಾರಣ ನೆಲೆ ಕಂಡುಕೊಂಡಿಲ್ಲ. ರಾಜ್ಯದಲ್ಲಿ ವೀರಶೈವ ಹಾಗೂ ಒಕ್ಕಲಿಗ ರಾಜಕಾರಣವಿದೆ. ಇವರು ಎಲ್ಲ ಪಕ್ಷದಲ್ಲಿದ್ದರೂ ಪಕ್ಷಭೇದ ಮರೆತು ಒಂದಾಗುತ್ತಾರೆ. ಆದರೆ ದಲಿತರಲ್ಲಿ ಒಗ್ಗಟ್ಟಿಲ್ಲ. ಆದ್ದರಿಂದ ಸಾಮಾಜಿಕ ಸಂಘಟನೆಗಳನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ. ಆನಂದ್, ಪ್ರೊ. ಷಣ್ಮುಗಂ, ಪಾಲಿಕೆಯ ಸದಸ್ಯ ಪುರುಷೋತ್ತಮ್ ಉಪಸ್ಥಿತರಿದ್ದರು.

Leave a Reply

comments

Related Articles

error: