ಪ್ರಮುಖ ಸುದ್ದಿ

ಶಾಂತಿ ಸಾಮರಸ್ಯ ಕಾಪಾಡಲು ಉಪವಾಸ ಧರಣಿ ಸತ್ಯಾಗ್ರಹ

ಪ್ರಮುಖ ಸುದ್ದಿ, ಹುಣಸೂರು, ಅ.೩: ನಗರದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಸಲುವಾಗಿ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರವನ್ನು ಜನರಿಗಾಗಿ ಜಾಗೃತಿ ವೇದಿಕೆಯಿಂದ ಹಮ್ಮಿಕೊಳ್ಳಲಾಗಿತ್ತು.
ಜನರಿಗಾಗಿ ಜಾಗೃತಿ ವೇದಿಕೆಯ ಸದಸ್ಯರು ನಗರದ ರೋಟರಿ ವೃತದಲ್ಲಿ ಸಮಾವೇಶಗೊಂಡು ಜಾತಿ ಮತ್ತು ಧರ್ಮಗಳ ವಿರುದ್ಧ ಎತ್ತಿಕಟ್ಟುವ ದುಷ್ಟ ಶಕ್ತಿಗಳ ವಿರುದ್ಧ ಕಿಡಿಕಾರಿದರು. ಧರಣಿ ನಿರತರನ್ನು ಉzಶಿಸಿ ಮಾತನಾಡಿದ ವೇದಿಕೆಯ ಗೌರವ ಅಧಕ್ಷ ಹಾಗೂ ದಸಂಸ ರಾಜ್ಯ ಸಂಚಾಲಕ ಹರಿಹರಾನಂದ ಸ್ವಾಮಿ ಹುಣಸೂರು ಶಾಂತಿ-ಸೌಹಾರ್ದತೆಗೆ ಹೆಸರಾದ ನೆಲ. ಇಲ್ಲಿ ವಿವಿಧ ಜಾತಿ, ಧರ್ಮ, ಭಾಷೆಗಳ ಜನರು ಪ್ರೀತಿ ವಿಶ್ವಾಸದಿಂದ ಬಾಳಿದ ಜಾರಿತ್ರಿಕ ಹಿನ್ನೆಲೆ ಇದೆ. ಇಂತಹ ನಮ್ಮೂರು ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದುಷ್ಟಶಕ್ತಿಗಳು ಹಾಗೂ ರಾಜಕಾರಣಿಗಳ ಕಪಿಮುಷ್ಠಿಗೆ ಸಿಲುಕಿ ನಲುಗುತ್ತಾ ನಮ್ಮೂರಿನ ಜನಸಾಮಾನ್ಯರ, ಯುವಜನರ ಬದುಕಿಗೆ ಕಿಚ್ಚು ಹಚ್ಚಿ ಇವರ ಬದುಕನ್ನು ನಾಶ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ವೇದಿಕೆಯ ಅಧಕ್ಷ ಡಿ.ಕೆ.ಕುನ್ನೇಗೌಡ ಮಾತನಾಡಿ, ನೂರಾರು ಮಂದಿ ಯುವಕರ ಮೇಲೆ ರೌಡಿ ಕಾಯಿದೆಯಡಿ ಪ್ರಕರಣ ದಾಖಲಾಗಿ ಹಲವಾರು ಯುವ ಜನರು ಜೈಲು ವಾಸ ಅನುಭವಿಸುವಂತಾಗಿದೆ. ಒಡೆದ ಮನಸ್ಸುಗಳು ಒಂದಾಗಬೇಕಾದರೆ ನಮಗೆ ಗಲಾಟೆ ಬೇಡ ಶಾಂತಿ ಬೇಕು ಎಂದು ಹೇಳಬೇಕಾಗಿದೆ. ನಮ್ಮಲ್ಲಿ ಮನುಷತ್ವ , ಮಾನವಿಯತೆ ಬರಬೇಕಾಗಿದೆ. ಶಾಂತಿ ಮರು ಸ್ಥಾಪನೆಯಾಗಬೇಕಾಗಿದೆ. ಆಶಾಂತಿಯಿಂದ ಶಾಂತಿಯ ಕಡೆಗೆ ದ್ವೇಷದಿಂದ ಪ್ರೀತಿಯ ಕಡೆಗೆ ನಾವುಗಳು ಸಾಗಬೇಕಾಗಿದೆ ಎಂದರು.
ಉಪವಾಸ ಧರಣಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಾಲ್ಲಾಡಿ, ತಾ.ಪಂ ಮಾಜಿ ಸದಸ್ಯ ಕೆ.ಎಸ್.ಅಣ್ಣಯ್ಯನಾಯಕ, ವೆಂಕಟೇಶ್, ನಗರಸಭೆ ಅಧಕ್ಷ ಕೆ.ಲಕ್ಷ್ಮಣ್, ಮಾಜಿ ಅಧಕ್ಷ ಹೆಚ್.ಎನ್.ಚಂದ್ರಶೇಖರ್, ಲ್ಯಾಂಪ್ ಸಹಕಾರ ಮಹಾಮಂಡಳದ ಅಧಕ್ಷ ಎಂ.ಕೃಷ್ಣಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: