ಕ್ರೀಡೆ

ನವೆಂಬರ್ ನಲ್ಲಿ ಏಷ್ಯಾ ಬಾಕ್ಸಿಂಗ್ ಚಾಂಪಿಯನ್ ಶಿಪ್: ಮೇರಿ ಕೋಮ್, ಸರಿತಾ ಗೆ ಸ್ಥಾನ

ನವದೆಹಲಿ,ಅ.3-ವಿಯೆಟ್ನಾಂನ ಹೊ ಚೀ ಮಿನ್ ನಲ್ಲಿ ನವೆಂಬರ್ 2 ರಿಂದ 11 ರವರೆಗೆ ನಡೆಯಲಿರುವ ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ 10 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಸ್ಟಾರ್ ಬಾಕ್ಸರ್ ಗಳಾದ ಮೇರಿ ಕೋಮ್ ಮತ್ತು ಸರಿತಾ ದೇವಿಗೆ ಸ್ಥಾನ ನೀಡಲಾಗಿದೆ.

ಚಾಂಪಿಯನ್ ಶಿಪ್ ಗಾಗಿ ನಡೆದ 3 ದಿನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೇರಿ ಕೋಮ್ 6 ಪಂದ್ಯಗಳನ್ನು ಆಡಿ 6ರಲ್ಲೂ ಗೆಲವು ಸಾಧಿಸಿದರು. ವಿಶ್ವ ಚಾಂಪಿಯನ್ ಶಿಪ್ ನ ಬೆಳ್ಳಿ ಪದಕ ವಿಜೇತೆ ಸರ್ಜುಬಾಲ ದೇವಿ ಎದುರು ಮೇರಿ ಕೋಮ್ ಸೆಣಸಿದ್ದರು. 2010ರಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಮೇರಿ ಇದೀಗ ತಮ್ಮ ನೆಚ್ಚಿನ 48 ಕೆಜಿ ವಿಭಾಗಕ್ಕೆ ವಾಪಸಾಗಿದ್ದಾರೆ. ಇನ್ನೂ ವೃತ್ತಿಪರ ಬಾಕ್ಸಿಂಗ್ ನತ್ತ ಮುಖ ಮಾಡಿದ್ದ ಸರಿತಾ ಅಮೆಚೂರ್ ಬಾಕ್ಸಿಂಗ್ ಗೆ ಹಿಂದಿರುಗಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: