ಮನರಂಜನೆ

ಬ್ಯುಸಿ ಶೆಡ್ಯೂಲ್ ನಲ್ಲಿಯೂ ಪತ್ನಿ-ಪುತ್ರನೊಂದಿಗೆ ಕಾಣಸಿಕ್ಕ ಶಾರುಖ್..!

ದೇಶ(ಮುಂಬೈ)ಅ.3:- ಬಾಲಿವುಡ್ಮ ಬಾದಶಹಾ ಶಾರುಖ್ ಖಾನ್ ಪತ್ನಿಯ ಜೊತೆ ಕಾಣಿಸಿಕೊಳ್ಳುವುದು ಅಪರೂಪವೇ. ಬಿಟೌನ್ ನ  ದಂಪತಿಗಳು ಜೊತೆಯಾಗಿ ಕಾಣಿಸಿಕೊಂಡರೆ ಸಾಕು ಸುದ್ದಿಯಾಗಿಬಿಡುತ್ತಾರೆ. ಬ್ಯುಸಿಯಾಗಿರುವ ಶಾರುಖ್ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಆನಂದ್ ಎಲ್ ರಾಯ್ ಅವರ ಹೆಸರಿಡದ ಚಿತ್ರದಲ್ಲಿ ಶಾರುಖ್ ಬ್ಯುಸಿಯಾಗಿದ್ದಾರೆ. ತನ್ನ ಬ್ಯುಸಿ ಸಮಯದಲ್ಲಿಯೂ ಬಿಡುವು ಮಾಡಿಕೊಂಡು ಪತ್ನಿಯೊಡನೆ ಸಮಯ ಕಳೆದರು. ಪತ್ನಿ ಗೌರಿಯ ಜೊತೆ ಕಿರಿಯ ಪುತ್ರ ಅಬ್ರಾಮ್ ಖಾನ್ ಕೂಡ ಕಾಣಸಿಕ್ಕರು. ಗೌರಿ ಖಾನ್ ನಿರ್ಮಾಪಕಿಯಷ್ಟೇ ಅಲ್ಲ ಇಂಟಿರೀಯರ್ ಡಿಸೈನರ್ ಕೂಡ ಆಗಿದ್ದಾರೆ.ಇತ್ತೀಚೆಗೆ ಜುಹುವಿನಲ್ಲಿ ಹೊಸ ಮಳಿಗೆಯನ್ನು ತೆರೆದಿದ್ದು ಈ ಸಂದರ್ಭ ನಟಿಯರಾದ ಕಾಜೋಲ್, ಶ್ರೀದೇವಿ, ಕರಿಷ್ಮಾ ಕಪೂರ್, ನಟರಾದ ರಣವೀರ್ ಕಪೂರ್, ಅರ್ಜುನ್ ಕಪೂರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತಿತರರು ಭೇಟಿ ನೀಡಿದ್ದಾರಂತೆ. ಸೋಮವಾರ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡ ಮಳಿಗೆಗೆ ಭೇಟಿ ನೀಡಿದರು. ಈ ಸಂದರ್ಭ ಶಾರುಖ್ ಖಾನ್ ಮತ್ತು ಅಬ್ರಾಮ್ ಖಾನ್ ಕೂಡ ಸ್ಥಳದಲ್ಲಿರುವುದು ವಿಶೇಷವಾಗಿತ್ತು. (ಎಸ್.ಎಚ್)

Leave a Reply

comments

Related Articles

error: