
ದೇಶಪ್ರಮುಖ ಸುದ್ದಿ
ಟೆಲಿಫೋನ್ ಎಕ್ಸಚೇಂಜ್ ಪ್ರಕರಣ : ಅ.23ರಂದು ಮಾರನ್ ಸಹೋದರರ ವಿರುದ್ಧ ಸಿಬಿಐ ಆರೋಪ ಪಟ್ಟಿ
ಚೆನ್ನೈ,ಅ.3 (ಪ್ರಮುಖ ಸುದ್ದಿ): ಮಾರನ್ ಸಹೋದರರ ವಿರುದ್ಧ ಟೆಲಿಫೋನ್ ಎಕ್ಸಚೇಂಜ್ ಪ್ರಕರಣದಲ್ಲಿ ಅಕ್ಟೋಬರ್ 23ರಂದು ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಕೇಂದ್ರೀಯ ತನಿಖಾ ಸಂಸ್ಥೆ – ಸಿಬಿಐ ಹೇಳಿದೆ.
ಆರೋಪಿತ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಮತ್ತು ಅವರಿಗೆ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ವಿ.ಗೌತಮನ್, ಕೆ.ಎಸ್. ರವಿ ಮತ್ತು ಎಸ್.ಕಣ್ಣನ್ ಅವರುಗಳು ಇಂದು ಸಿಬಿಐ ಪ್ರಕರಣಗಳಿಗಾಗಿನ 14ನೇ ವಿಶೇಷ ನ್ಯಾಯಾಧೀಶರ ಮುಂದೆ ಇಂದು ಹಾಜರಾದರು.
ದಯಾನಿಧಿ ಸಹೋದರ ಕಲಾನಿಧಿ ಮಾರನ್ ಅವರು ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆಗೆ ಹಾಜರಾಗಿರಲಿಲ್ಲ. 2004-2007ರ ವರೆಗೆ ದಯಾನಿಧಿ ಮಾರನ್ ಅವರು ಕೇಂದ್ರ ಸಚಿವರಾಗಿದ್ದಾಗ ಬಿಎಸ್ಎನ್ಎಲ್ನ 764 ಹೈ-ಸ್ಪೀಡ್ ಡಾಟಾ ಲೈನ್ಗಳನ್ನು ತಮ್ಮ ಮನೆಯಲ್ಲಿ ದುರ್ಬಳಕೆ ಮಾಡಿಕೊಂಡ ಆರೋಪವಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.
ಬಿಎಸ್ಎನ್ಎಲ್ ಲೈನ್ಗಳನ್ನು ದಯಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಸಮೂಹದ ಚಾನೆಲ್ಗಳ ವ್ಯವಹಾರಕ್ಕಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಮಾರನ್ ಸಹೋದರರ ಮೇಲಿದೆ.
(ಎನ್.ಬಿ/ಏಜೆನ್ಸಿ)