ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ಅ.3 : ದಿ ಆರ್ಟ್ ಆಫ್ ಲಿವಿಂಗ್ ಶ್ರೀರವಿಶಂಕರ್ ಗುರೂಜಿಯವರ ಶ್ರೀತತ್ವ ಸಂಸ್ಥೆಯಿಂದ ನಗರದ ಜೆ.ಎಸ್.ಎಸ್ ಆಸ್ಪತ್ರೆ ಎದುರಿನ ಸಂಜೀವಿನಿ ಆಯುರ್ವೇದಾಲಯದಲ್ಲಿ ಪ್ರತಿ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಶಿಬಿರದಲ್ಲಿ ಮಧುಮೇಹ, ಸಂಧಿವಾತ, ರಕ್ತದೊತ್ತಡ, ಅಜೀರ್ಣ ಸಮಸ್ಯೆ, ಹೃದ್ರೋಗ, ರಕ್ತ ಹೀನತೆ, ಮಾನಸಿಕ ತೊಂದರೆ, ತಲೆ ನೋವು, ಅಸ್ತಮ, ಚರ್ಮದ ಸಮಸ್ಯೆ, ತಲೆ ಒಟ್ಟು ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳಿಗೆ ಉಚಿತ ತಪಾಸಣೆ ನಡೆಸಿ ಸಲಹೆ ನೀಡಲಾಗುವುದು. ಮಾಹಿತಿಗಾಗಿ ಮೊ.ನಂ 98457882098, 8694035350, 8722447567 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: