ಪ್ರಮುಖ ಸುದ್ದಿಮೈಸೂರು

ಮುಡಾ ಅಧ್ಯಕ್ಷರಾಗಿ ಧ್ರುವಕುಮಾರ ಅಧಿಕಾರ ಸ್ವೀಕಾರ

ಮೈಸೂರು ನಗರಾಭಿವೃದ್ಧಿ ನೂತನ ಅಧ್ಯಕ್ಷರಾಗಿ ಮಾಜಿ ಮಹಾಪೌರ ಡಿ. ಧ್ರುವಕುಮಾರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭಾಂಗಣದಲ್ಲಿ ಕಡತಕ್ಕೆ ಸಹಿ ಹಾಕುವ ಮೂಲಕ ಆಯುಕ್ತರಾದ ಡಾ. ಎಂ. ಮಹೇಶ್ ಅವರಿಂದ ಅಧಿಕಾರ ಸ್ವೀಕರಿಸಿ ಅಧ್ಯಕ್ಷರ ಕಚೇರಿಗೆ ತೆರಳಿ ಅಧ್ಯಕ್ಷರ ಕುರ್ಚಿಗೆ ತಲೆಬಾಗಿ ನಮಿಸಿ ಸ್ಥಾನ ಅಲಂಕರಿಸಿದರು. ನಂತರ ಮಾತನಾಡಿ, ನನ್ನ ನೇಮಕಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ, ಜಿಲ್ಲೆಯ ಸಚಿವರಿಗೆ, ಶಾಸಕರಿಗೆ, ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಾಧಿಕಾರವನ್ನು ಸಾರ್ವಜನಿಕ ಸ್ನೇಹಿಯಾಗಿ ಮಾಡುವುದಾಗಿ ಘೋಷಿಸಿದರು. ಅಧಿಕಾರ ಸ್ವೀಕಾರಕ್ಕೂ ಮುನ್ನ ದಿವಾನ್ಸ್ ರಸ್ತೆಯ ಧರ್ಮಪರಾಯಿಣಿ ಆಲಮ್ಮನವರ ಛತ್ರದಿಂದ ಕಾರ್ಯಕರ್ತರು, ಬೆಂಬಲಿಗ ಅಭಿಮಾನಿಗಳೊಂದಿಗೆ ತಮಟೆ, ನಗಾರಿ, ವಿವಿಧ ಜಾನಪದ ಕಲಾತಂಡಗಳ  ಸಮೇತ ಮೆರವಣಿಗೆಯ ಮೂಲಕ ಕಚೇರಿಗೆ ತೆರಳಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿರು.

ಮಹಾನಗರ ಪಾಲಿಕೆ ಸದಸ್ಯರಾಗಿ, ಮಹಾಪೌರರಾಗಿ. ಮುಡಾ ಸದಸ್ಯರಾಗಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಸುಮಾರು ಎರಡು ತಿಂಗಳ ಕಾಲ ಖಾಲಿ ಇದ್ದ ಸ್ಥಾನ್ಕಕೆ ಧ್ರುವಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅಭಿಮಾನಿಗಳ ಹರ್ಷೋದ್ಘಾರ ಕರತಾಡನ ಹಾಗೂ ಹಿರಿಯರ ಅಧಿಕಾರಿಗಳು ಶುಭ ಹಾರೈಸಿದರು. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಕರ್, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಜೆ. ಗೋಪಿ, ಗೋಪಾಲಕರ ಸಂಘದ ಉಪಾಧ‍್ಯಕ್ಷ ಕೆ.ಜಿ. ಕೊಪ್ಪಲಿನ ಮೊಗಣ್ಣ, ನಗರಪಾಲಿಕೆ ಸದಸ್ಯರಾದ ಡಿ. ನಾಗಭೂಷಣ್, ಪ್ರಶಾಂತ್ ಗೌಡ, ನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಎಸ್. ಜಗದೀಶ್, ಮಾಜಿ ಉಪಮಹಾಪೌರ ಲಕ್ಷ್ಮಣ, ಸಿಟಿ ಕೋ ಅಪರೇಟಿವ್ ಬ್ಯಾಂಕ್ ನ ಅಧ್ಯಕಷ ದಿನೇಶ್ ಎಂ. ವೆಂಕಟಲಿಂಗಯ್ಯ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೋಟೆಹುಂಡಿ ಮಹದೇವ ಮುಂತಾದವರು ಸಾಕ್ಷಿಯಾದರು.

 

Leave a Reply

comments

Related Articles

error: