ಕರ್ನಾಟಕ

ಕೊಡವ ಸಮಾಜಗಳ ಒಕ್ಕೂಟದ ಕ್ರೀಡಾಕೂಟ ಸಮಿತಿಯ ಪೂರ್ವ ಭಾವಿ ಸಭೆ

ರಾಜ್ಯ(ಮಡಿಕೇರಿ),ಅ.3 ;- ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯು ಅ.26,27 ಮತ್ತು 28 ರಂದು ಬಾಳುಗೋಡಿನಲ್ಲಿ ನಡೆಯಲಿದ್ದು, ಕ್ರೀಡಾಕೂಟ ಸಮಿತಿಯ ಪೂರ್ವ ಭಾವಿ ಸಭೆಯು ಅ.3 ರಂದು ಬಾಳುಗೋಡಿನಲ್ಲಿ ನಡೆಯಿತು.
ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರಾದ ಮಣವಟ್ಟಿರ ಈ. ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಕಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ,ಭಾರದ ಗುಂಡು ಎಸೆಯುವ ಸ್ಪರ್ಧೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಅ.14ರೊಳಗೆ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರು ತಮ್ಮ ತಮ್ಮ ತಂಡದ ಭಾಗವಹಿಸುವಿಕೆ ಮತ್ತು ತಂಡದ ಆಟಗಾರರ ಪಟ್ಟಿಯನ್ನು 2000 ರೂ.ಪ್ರವೇಶ ಶುಲ್ಕದೊಂದಿಗೆ ಅಧ್ಯಕ್ಷರು, ಕ್ರೀಡಾ ಸಮಿತಿ,ಕೊಡವ ಸಮಾಜಗಳ ಒಕ್ಕೂಟ ಬಾಳುಗೋಡು, ವಿರಾಜಪೇಟೆ ಇವರಿಗೆ ತಲುಪಿಸುವಂತೆ ತೀರ್ಮಾನಿಸಲಾಯಿತು. ಪಾವತಿಸಿಕೊಂಡ ಪ್ರವೇಶ ಶುಲ್ಕ 2000 ರೂ.ವನ್ನು ಕ್ರೀಡಾಕೂಟಕ್ಕೆ ಬಂದು ಆಡಿದ ತಂಡಕ್ಕೆ ಮರುಪಾವತಿಸಲಾಗುವುದು, ಆಕಸ್ಮಾತ್ ಗೈರು ಹಾಜರಾಗುವ ತಂಡಗಳ ಪ್ರವೇಶ ಶುಲ್ಕವನ್ನು ನೀಡಲಾಗುವುದಿಲ್ಲ ಎಂಬ ತೀರ್ಮಾನವನ್ನು ಕೈಗೊಳ್ಳಲಾಯಿತು.
ಹಾಕಿ ಪಂದ್ಯಾಟದ ಅಂತಿಮ ಪಂದ್ಯಾವಳಿಯನ್ನು ಅ.28 ರಂದು ಮಧ್ಯಾಹ್ನ 2 ಗಂಟೆಗೆ ನಡೆಸುವಂತೆ ತೀರ್ಮಾನಿಸಲಾಯಿತು, ಹೆಚ್ಚಿನ ಮಾಹಿತಿಗೆ ಕಂಬಿರಂಡ ಕಿಟ್ಟು ಕಾಳಪ್ಪ : 94486 47273, ಬೊಳ್ಳಿಯಂಗಡ ದಾದು ಪೂವಯ್ಯ: 9448504053, ಕೋಟೇರ ರಘು ಕಾರ್ಯಪ್ಪ: 9108543474, ಮಣವಟ್ಟಿರ ಈ ಚಿಣ್ಣಪ್ಪ : 944821705 ನ್ನು ಸಂಪರ್ಕಿಸಬಹುದು.

ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ, ಕ್ರೀಡಾ ಸಮಿತಿಯ ನಿರ್ದೇಶಕರಾದ ಕಾಟುಮಣಿಯಂಡ ಉಮೇಶ್, ಕನ್ನಂಬಿರ ಚಿನ್ನಪ್ಪ,ಮಾದೇಟಿರ ಸಂಪಿ ಪೂಣಚ್ಚ, ತಂಬುಕುತ್ತಿರ ಮಧು ಮಂದಣ್ಣ, ಬೊಳ್ಳಜಿರ ಅಯ್ಯಪ್ಪ ಮತ್ತೀತರರು ಪಾಲ್ಗೊಂಡಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: