ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಕಳ್ಳತನ ನಡೆಸುತ್ತಿದ್ದ ಕಳ್ಳರ ಬಂಧನ

ಮೈಸೂರು,ಅ.3:- ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿಯ ದರ್ಶನ ಪಡೆಯುವ ವೇಳೆ ಬ್ಯಾಗ್ನಲ್ಲಿದ್ದ ಹಣ,ಮೊಬೈಲ್ ಗಳನ್ನು ಕದ್ದ ಕಳ್ಳರನ್ನು ಪೊಲೀಸರು ಮಂಗಳವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಧಾರವಾಡ ನಿವಾಸಿಗಳಾದ ನಾಗೇಶ್ ಬಜಂತ್ರಿ, ಈಶ್ವರಿ ಭಜಂತ್ರಿ, ಸತ್ಯಮ್ಮ ಭಜಂತ್ರಿ, ಶೀಲಾ ಭಜಂತ್ರಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ನೊಕೀಯಾ ಮೊಬೈಲ್, ಪರ್ಸ್, 11.500ಗ್ರಾಂ ಗೋಲ್ಡ್ ಚೈನ್ ನ್ನು ವಶಪಡಿಸಿಕೊಳ್ಳಲಾಗಿದೆ. ಇವರನ್ನು ತನಿಖೆಗೊಳಪಡಿಸಿ ವಿಚಾರಿಸಲಾಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.  ಕೃಷ್ಣರಾಜ  ಪೊಲೀಸ್ ಠಾಣೆಯ ಪಿಐ ಬಿ.ಎಸ್.ಪ್ರಕಾಶ್, ಪ್ರೊ.ಪಿಎಸ್ಐ ಸುನಿಲ್, ಎಎಸ್ ಐ ಲಕ್ಷ್ಮಿನಾರಾಯಣ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: