ಮನರಂಜನೆಮೈಸೂರು

‘ರಾಮಾ ರಾಮಾ ರೇ’ ಯಶಸ್ವಿ ಪ್ರದರ್ಶನ

‘ರಾಮಾ ರಾಮಾ ರೇ’  ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಮೂರನೇ ವಾರದತ್ತ ಮುನ್ನುಗ್ಗುತ್ತಿದೆ ಎಂದು ಸಿನಿಮಾ ನಿರ್ದೇಶಕ ಡಿ. ಸತ್ಯಪ್ರಕಾಶ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿನಿಮಾಕ್ಕೆ ನಿರ್ದಿಷ್ಟ ನಿರ್ಮಾಪಕರಿಲ್ಲ. ಚಿತ್ರದ ಎಲ್ಲಾ ಕಲಾವಿದರೂ ಸೇರಿ ಹಣ ಹೊಂದಿಸಿಕೊಂಡು ಸಿನಿಮಾ ಮಾಡಿದ್ದು, ಇದೊಂದು ಹೊಸ ಕಲಾವಿದರ ತಂಡದ ಮೊದಲ ಪ್ರಯತ್ನ. ಕನ್ನಡ ಕಲರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ‘ರಾಮಾ ರಾಮಾ ರೇ’ ಸಿನಿಮಾ ತಯಾರಾಗಿದೆ” ಎಂದು ಹೇಳಿದರು.

ಬದುಕಿನಲ್ಲಿ ಬರುವ ಪ್ರೀತಿ, ದ್ವೇಷ, ನೋವು–ನಲಿವು, ಆಸೆ–ಅಸೂಯೆ ಸೇರಿದಂತೆ ಹತ್ತಾರು ಅಂಶಗಳನ್ನು ಹೊಂದಿರುವ ಪಾತ್ರಗಳನ್ನು ತೆರೆ ಮೇಲೆ ತಂದಿದ್ದು, ಸಿನಿಮಾ ಕುರಿತು ಕನ್ನಡದ ಮೇರು ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಚಿತ್ರ ಬಿಡುಗಡೆಗೊಂಡ ವೇಳೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರವೊಂದರಲ್ಲಿ ಪ್ರತಿ ದಿನ ಒಂದು ಪ್ರದರ್ಶನಕ್ಕೆ ಮಾತ್ರ ಅವಕಾಶವಿತ್ತು. ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ 33 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ ಎಂದರು.

ಸಿನಿಮಾದ ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟರಾದ ಬಿಂಬಶ್ರೀ, ನಟರಾಜ್ ಎಸ್. ಭಟ್, ಧರ್ಮಣ್ಣ ಕಡೂರು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: