ಕರ್ನಾಟಕಪ್ರಮುಖ ಸುದ್ದಿ

ನ್ಯಾಶನಲ್ ಇನ್ಸಟಿಟ್ಯೂಟ್ಸ್ ಆಫ್ ಫಾರ್ಮಾಸ್ಯೂಟಿಕಲ್ಸ್ ಎಜ್ಯುಕೇಶನ್ ರಿಸರ್ಚ್ ಕೇಂದ್ರ ಸ್ಥಾಪಿಸಲು ಧೃವನಾರಾಯಣ ಒತ್ತಾಯ

ರಾಜ್ಯ(ಚಾಮರಾಜನಗರ),ಅ.4:-  ನ್ಯಾಶನಲ್ ಇನ್ಸಟಿಟ್ಯೂಟ್ಸ್ ಆಫ್ ಫಾರ್ಮಾಸ್ಯೂಟಿಕಲ್ಸ್ ಎಜ್ಯುಕೇಶನ್ ರಿಸರ್ಚ್ ಕೇಂದ್ರವನ್ನು ಚಾಮರಾಜನಗರದಲ್ಲಿ ಸ್ಥಾಪಿಸುವಂತೆ ಸಂಸದ ಧೃವನಾರಾಯಣ್ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಸಚಿವ ಅನಂತಕುಮಾರ್ ಅವರನ್ನು ಭೇಟಿಯಾದ ಸಂಸದ ಧ್ರುವ ನಾರಾಯಣ್ ಅವರು, ಕರ್ನಾಟಕಕ್ಕೆ ನ್ಯಾಶನಲ್ ಇನ್ಸಟಿಟ್ಯೂಟ್ಸ್ ಆಫ್ ಫಾರ್ಮಾಸ್ಯೂಟಿಕಲ್ಸ್ ಎಜ್ಯುಕೇಶನ್ ರಿಸರ್ಚ್ ಕೇಂದ್ರದ ಅವಶ್ಯಕತೆ ಇದೆ. ಈ ಕೇಂದ್ರ ಸ್ಥಾಪನೆಯಾದರೆ ರಾಜ್ಯದ ವಿದ್ಯಾರ್ಥಿಗಳು  ಫಾರ್ಮಸ್ಯೂಟಿಕಲ್ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ  ಮತ್ತು ಡಾಕ್ಟರೇಟ್ ಸಂಶೋಧನೆ ಕೈಗೊಳ್ಳಲು ಅನುಕೂಲವಾಗಲಿದೆ.
ಈ ಕೇಂದ್ರದ ಸ್ಥಾಪನೆಗೆ ಚಾಮರಾಜನಗರದಲ್ಲಿ 1600 ಎಕರೆ ಸರ್ಕಾರಿ ಭೂಮಿ ಇದೆ. ಈ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಚಾಮರಾಜನಗರಕ್ಕೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: