ಪ್ರಮುಖ ಸುದ್ದಿಮೈಸೂರುಸುದ್ದಿ ಸಂಕ್ಷಿಪ್ತ

ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಅನುಮಾನಾಸ್ಪದ ಸಾವು

ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮಾಗಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ರುದ್ರೇಶ್ ಸಾವಿನ ಕಾವು ಹಾರುವ ಮುನ್ನವೇ ಮತ್ತೊಬ್ಬ ಕಾರ್ಯಕರ್ತನ ಬಲಿಯಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಯುವ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಾಗಳಿ ರವಿ (35) ಅನುಮಾನಾಸ್ಪದ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ಕಳೆದ ಶುಕ್ರವಾರ ರಾತ್ರಿ  ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ವಾಹನದಿಂದ ಬಿದ್ದು ಬಾರಿ ಪೆಟ್ಟಾಗಿರುವುದರಿಂದ ಸಾವು ಸಂಭವಿಸಿದೆ ಎಂದು ಕಂಡು ಬಂದರು ಇದನ್ನು ಬಿಜೆಪಿ ಕಾರ್ಯಕರ್ತರು ಅಲ್ಲಗೆಳೆದಿದ್ದು ಕೊಲೆಯಾಗಿರುವ ಬಗ್ಗೆ ಅನುಮಾನಾವನ್ನು ವ್ಯಕ್ತಪಡಿಸಿದ್ದಾರೆ. ಈತನ ಮೃತ ದೇಹವು ಗ್ರಾಮದ ಹೊರಭಾಗದಲ್ಲಿ ಪತ್ತೆಯಾಗಿದೆ.

ಈತನ ಮೃತ ದೇಹವನ್ನು ನಗರದ ಕೆ.ಆರ್.ಆಸ್ಪತ್ರೆಯ ಶವ ಪರೀಕ್ಷೆಗಾಗಿ ತರಲಾಗಿದ್ದು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ನೇಹಿತರು ಶವಾಗಾರದ ಬಳಿ ಜಮಾಯಿಸಿದ್ದು, ಮೃತ ರವಿಯ ಕತ್ತು ಸೀಳಿದ್ದು ಇದೊಂದು ಕೊಲೆಯೆಂದು ಅನುಮಾನಿಸಿದ್ದಾರೆ.

ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ ಸುತ್ತಮುತ್ತ ಮೈಸೂರು ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಆಸ್ಪತ್ರೆಗೆ ಬೇಟಿ ನೀಡುವ ಸಂಭವವಿದೆ. ಮೃತ ರವಿಯೂ ರೈತಾಪಿ ವರ್ಗಕ್ಕೆ ಸೇರಿದವನಾಗಿದ್ದು ಕಳೆದ ಏಳು ವರ್ಷಗಳಿಂದ ಕೃಷಿ ಚಟುವಟಿಕೆಗೆ ನಡೆಸುತ್ತಿದ್ದ, ಇತ್ತೀಚಿನ ವರ್ಷಗಳಲ್ಲಿ ರಿಯಲ್ ಏಸ್ಟೇಟ್ ವ್ಯವಹಾರಕ್ಕೂ ಕೈಹಾಕಿದ್ದ ಎನ್ನಲಾಗಿದೆ.

Leave a Reply

comments

Related Articles

error: