ಮೈಸೂರು

ವಕೀಲ ರಾಮಕೃಷ್ಣಗೆ ಟಿಕೆಟ್ ನೀಡುವಂತೆ ಸಿಎಂ ಮನೆ ಮುಂದೆ ನಿಂತು ಒತ್ತಾಯಿಸಿದ ಬೆಂಬಲಿಗರು

ಮೈಸೂರು,ಅ.4:- ಹುಣಸೂರು ವಿಧಾನ ಸಭಾ ಕ್ಷೇತ್ರಕ್ಕೆ ವಕೀಲ ರಾಮಕೃಷ್ಣಗೆ ಟಿಕೆಟ್ ನೀಡುವಂತೆ ಅಭಿಮಾನಿಗಳು, ಬೆಂಬಲಿಗರು ಒತ್ತಾಯಿಸಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ವಕೀಲ ರಾಮಕೃಷ್ಣ ಅವರಿಗೇ ಟಿಕೇಟ್ ನೀಡಿ ಎಂದು  ವಕೀಲ ರಾಮಕೃಷ್ಣರ ಭಾವ ಚಿತ್ರ ಹಿಡಿದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕೀಲ ರಾಮಕೃಷ್ಣಅವರಿಗೆ ಜೈಕಾರ ಹಾಕಿದ್ದಾರೆ. ಹಾಲಿ ಎಂ.ಎಲ್.ಎ. ಮಂಜುನಾಥ್ ಇರುವಾಗಲೇ ಹುಣಸೂರು ಕ್ಷೇತ್ರಕ್ಕೆ ಮತ್ತೊಬ್ಬರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: