ಮೈಸೂರು

ಅ.6ರಿಂದ ಜೆ.ಎಸ್.ಎಸ್ ಅರ್ಬನ್ ಹಾತ್ ನಲ್ಲಿ ಕರಕುಶಲ ವಸ್ತು ಪ್ರದರ್ಶನ ಮೇಳ

ಮೈಸೂರು,ಅ.4 : ಕೇಂದ್ರ ಜವಳಿ ಮಂತ್ರಾಲಯ, ಜೆ.ಎಸ್.ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ಜೆ.ಎಸ್.ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 10 ದಿನಗಳ ಕಾಲ ಕರಕುಶಲ ವಸ್ತುಪ್ರದರ್ಶನ ಮೇಳವನ್ನು ಆಯೋಜಿಸಲಾಗಿದೆ ಎಂದು ಜೆ ಎಸ್ ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಶಂಕರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್ 6 ರಂದು ನಗರದ ಜೆ ಎಸ್ ಎಸ್ ಅರ್ಬನ್ ಹಾತ್ ನಲ್ಲಿ ಆಯೋಜಿಸಿರುವ ಮೇಳವನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ರವರು ಉದ್ಘಾಟಿಸುವರು. ಈ ಮೇಳದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವ ದೇಶದ ನಾನಾ ಭಾಗಗಳಿಂದ ಸುಮಾರು 50 ಕ್ಕೂ ಹೆಚ್ಚಿನ ಕುಶಲಕರ್ಮಿಗಳು ತಮ್ಮ ರಾಜ್ಯದ ವಿಭಿನ್ನ ಸಾಂಸ್ಕೃತಿಕ ಗರಿಮೆಯ ಕಲಾವಸ್ತುಗಳನ್ನು ಪ್ರದರ್ಶಿಸಿ ಮಾರಾಟ ಮಾಡುವರು. ಭಾರತದಲ್ಲೆಡೆಯಿರುವ ಕುಶಲಕಲಾಕಾರರನ್ನು ನೇರವಾಗಿ ಆರಾಧಕರ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ತಂದು ನೇರ ಹಾಗೂ ಮುಕ್ತ ಮಾರುಕಟ್ಟೆ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು.
ಕಾಶ್ಮೀರದ ಮೃದುವಾದ ಶಾಲು,ಎಂಬ್ರಾಯಿಡರಿ ಡ್ರೆಸ್ ಗಳು,ಆಭರಣಗಳು,ರೇಷ್ಮೆ ಸೀರೆಗಳು, ಬಿದಿರಿನ ಗೃಹಪಯೋಗಿ ವಸ್ತುಗಳು, ಕೃತಕ ಹೂವುಗಳು, ಸಾಂಪ್ರದಾಯಿಕ ಗೊಂಬೆಗಳು,ಮಣ್ಣಿನಿಂದ ತಯಾರಿಸಿದ ಹೂಜಿಗಳು, ಹೂ ಕುಂದಗಳು ಸೇರಿದಂತೆ ಇನ್ನಿತರೇ ವಸ್ತುಗಳು ಮಾರಾಟಕ್ಕೆ ಲಭ್ಯವಿದೆ.ಈ ಮೇಳಕ್ಕೆ ಒಮ್ಮೆ ಭೇಟಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಕೇಶ್ ರೈ,ಶಿವನಂಜಸ್ವಾಮಿ ಹಾಜರಿದ್ದರು.

Leave a Reply

comments

Related Articles

error: