ಮೈಸೂರು

ದೆವ್ವ ಬಿಡಿಸುತ್ತೇನೆಂದು ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಪೂಜಾರಿ : ದೂರು ದಾಖಲು

ಮೈಸೂರು,ಅ.4:- ಮೌಡ್ಯ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿದ್ದರೆ, ಇತ್ತ ಪಿರಿಯಾಪಟ್ಟಣ ತಾಲೂಕಿನ ನಾಗನಹಳ್ಳಿ ಪಾಳ್ಯದ ಅಮಾಯಕಿ ಶಾರದ ಎಂಬ ಮಹಿಳೆಯ ಮೇಲೆ ದೇವಸ್ಥಾನದ ಪೂಜಾರಿಯೊಬ್ಬ ಅಮಾನವೀಯ ಕೃತ್ಯ ನಡೆಸಿದ  ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ನಾಗನಹಳ್ಳಿ ಪಾಳ್ಯದ ಶಾರದ ಎಂಬುವವರಿಗೆ ಅನಾರೋಗ್ಯ ಕಾಡುತ್ತಿದ್ದು ವಿಚಿತ್ರವಾಗಿ ವರ್ತಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ಆಕೆಯ ದೊಡ್ಡಮ್ಮ ಸೆ.30ರಂದು ಬೆಟ್ಟದಪುರದಲ್ಲಿರುವ ದೇವಾಲಯಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಕುಮಾರ್ ಎಂಬಾತ ಶಾರದ ಮೈಮೆಲೆ ದೆವ್ವ ಬಂದಿದ್ದು ಅದನ್ನು ಬಿಡಿಸುವುದಾಗಿ ತಿಳಿಸಿ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಶಾರದ ಅಸ್ವಸ್ಥಳಾಗಿ ಬಿದ್ದಿದ್ದರಿಂದ ಈಗ ದೆವ್ವ ಈಕೆಯ ಮೈಮೇಲಿನಿಂದ ಬಿಟ್ಟು ಹೋಗಿದೆ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಶಾರದಳನ್ನು ಮನೆಗೆ ಕರೆತಂದು ನೋಡಿದಾಗ ಆಕೆ ಗಾಯಗೊಂಡಿರುವುದು ತಿಳಿದು ಬಂದಿದೆ. ಆಕೆಯ ಪತಿ ಲಕ್ಷ್ಮಾ ಬೋವಿ ಶಾರದಳನ್ನು ಪಿರಿಯಾಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಮೈಮೇಲೆ ದೆವ್ವ ಬಂದಿದ್ದು ಅದನ್ನು ಓಡಿಸುವುದಾಗಿ ಮಹಿಳೆಗೆ ಅಮಾನುಷವಾಗಿ ಥಳಿಸಿರುವ ದೇವಾಲಯದ ಪೂಜಾರಿ ಕುಮಾರ್ ವಿರುದ್ಧ ಪೀಡಿತೆಯ ಪತಿ ಲಕ್ಷ್ಮಾಬೋವಿ ಬೆಟ್ಟದಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೆತ್ತಿಕೊಂಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: