ಕರ್ನಾಟಕ

ಅಕ್ರಮ ಸಕ್ರಮ ಯೋಜನೆಯಡಿ ಭೂಸಾಗುವಳಿಯಲ್ಲಿ ನಿರತರಾಗಿರುವ 13 ಅರ್ಜಿದಾರರಿಗೆ ಸಾಗುವಳಿ ಚೀಟಿ ವಿತರಣೆ

ರಾಜ್ಯ(ಚಾಮರಾಜನಗರ)ಅ.4:- ಕೊಳ್ಳೇಗಾಲ ತಾಲೂಕಿನ ಹನೂರು ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಭೂಸಾಗುವಳಿಯಲ್ಲಿ ನಿರತರಾಗಿರುವ 13 ಅರ್ಜಿದಾರರಿಗೆ ಸಾಗುವಳಿ ಚೀಟಿಯನ್ನು ಹನೂರು ಶಾಸಕ ಆರ್.ನರೇಂದ್ರ ವಿತರಿಸಿದರು.

ಪಟ್ಟಣದ ತಾಲೂಕು ಕಛೇರಿಯ ಆವರಣದಲ್ಲಿ ಹನೂರು ಕ್ಷೇತ್ರ ವ್ಯಾಪ್ತಿಯ ಕೆಂಚಯ್ಯನದೊಡ್ಡಿ ಜಯಮ್ಮ, ಕೆ.ಗುಂಡಾಪುರ ಸಿದ್ದಾರ್ಥನ್, ಜಲ್ಲಿಪಾಳ್ಯ ಮಾರಿಮುತ್ತು, ಮಾದೇಶ, ಕೃಷ್ಣಭೋವಿ ಸೇರಿದಂತೆ ಸುಮಾರು 13 ಮಂದಿ ಅರ್ಜಿದಾರರಿಗೆ ಸಾಗುವಳಿ ಚೀಟಿಯನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಹನೂರು ಕ್ಷೇತ್ರದಲ್ಲಿ ಸಾಗುವಳಿ ಮಾಡುತ್ತಿದ್ದವರ ಹಲವರ ಅರ್ಜಿಗಳ ಪೈಕಿ ಬಂಡಿದಾರಿ, ಕೆರೆಹಳ್ಳ ಹಾಗೂ ಗೋಮಾಳಗಳಲ್ಲಿ ಸಾಗುವಳಿ ಮಾಡುವವರಿಗೆ ಹೊರತು ಪಡಿಸಿ ನಮ್ಮ ಸಮಿತಿಯಿಂದ ಸುಮಾರು 25 ಮಂದಿ ಆಯ್ಕೆ ಮಾಡಲಾಗಿದೆ. ಸಮಿತಿಯು ಸರ್ವೆ ಮಾಡುವ ಸಂದರ್ಭದಲ್ಲಿ 13 ಮಂದಿಗಳನ್ನು ಮಾತ್ರ ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಾಗುವಳಿ ಅರ್ಜಿ ಪರಿಶೀಲಿಸಿ ವಿತರಿಸಲಾಗಿದೆ. ಭೂಮಿ ಸ್ವಾಧಿನದಲ್ಲಿರುವವರನ್ನು ಗುರುತಿಸಿ ಇನ್ನೂ ಉಳಿದವರಿಗೆ ಶೀಘ್ರದಲ್ಲೇ ಸಾಗುವಳಿ ಚೀಟಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಮಾಕ್ಷಮ್ಮ. ಹನೂರು ತಹಸೀಲ್ದಾರ್ ಮಹದೇವಸ್ವಾಮಿ, ಮಹದೇವಪ್ಪ. ಪಾಳ್ಯಕೃಷ್ಣ ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: