ಸುದ್ದಿ ಸಂಕ್ಷಿಪ್ತ
ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ : ಅರ್ಜಿ ಆಹ್ವಾನ
ಮೈಸೂರು,ಅ.4 : ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆ ಮತ್ತು ಯು.ಎಸ್.ಎನ ಸ್ವರಾಲಯಂ ಅರ್ಟ್ಸ್ ಫೋರಂ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಸಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಅ.11ರಂದು ವಾದ್ಯ ಮತ್ತು ಗಾಯನ ಎರಡು ವಿಭಾಗಗಳಲ್ಲಿಯೂ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳು ಒಂದು ಕೃತಿಯನ್ನು ಸಂಕ್ಷಿಪ್ತವಾಗಿ 8 ನಿಮಿಷಗಳಲ್ಲಿ ಪ್ರಸ್ತುತಪಡಿಸಬೇಕಾಗಿದೆ, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಅ.7ರಂದು ಕೊನೆಯ ದಿನವಾಗಿದೆ. ಡಿಸೆಂಬರ್ ನಲ್ಲಿ ಆಯೋಜಿಸಿರುವ ‘ಸುಲೋಚನ ಪಟ್ಟಾಭಿರಾಮನ್’ ಅವರ 9ನೇ ವಾರ್ಷಿಕೋತ್ಸವದಂದು ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದೆ. ಮಾಹಿತಿಗಾಗಿ ಮೊ.ನಂ 9480451100 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)