
ದೇಶ(ಮುಂಬೈ)ಅ.4:- ವಿರಾಟ್ ಕೊಯ್ಲಿ ಕ್ರಿಕೆಟ್ ಜಗತ್ತಿನ ಸ್ಟಾರ್ ಆದರೆ ಅಮೀರ್ ಖಾನ್ ಬಾಲಿವುಡ್ ಸ್ಟಾರ್. ಇವರಿಬ್ಬರೂ ಒಂದೇ ಪರದೆಯ ಮೇಲೆ ಕಾಣಿಸಿಕೊಂಡರೆ..?
ಆದರೆ ಇವೆಲ್ಲ ಸಾಧ್ಯನಾ ಎಂಬ ಪ್ರಶ್ನೆ ಕಾಡುತ್ತಿರಬಹುದು. ಆದರೆ ಸಾಧ್ಯವಿದೆಯಂತೆ. ಶೀಘ್ರದಲ್ಲಿಯೇ ಇಬ್ಬರೂ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಇಬ್ಬರೂ ಚಾಟ್ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದ್ದು, ಮಂಗಳವಾರ ಚಿತ್ರೀಕರಣ ನಡೆದಿದೆ. ವಿರಾಟ್ ಮತ್ತು ಅಮೀರ್ ಖಾನ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದ್ದು, ವಿರಾಟ್ ಕ್ಲೈಪ್ ಹಿಡಿದಿದ್ದು, ಅಮೀರ್ ಸ್ಟೈಲಿಶ್ ಆಗಿ ವಿರಾಟ್ ಜೊತೆ ನಿಂತಿದ್ದಾರೆ. ಈ ಶೋ ದೀಪಾವಳಿಯಲ್ಲಿ ಪ್ರಸಾರವಾಗಲಿದೆಯಂತೆ. ಇಬ್ಬರೂ ತಮ್ಮ ಜೀವನದ ಹಲವು ವಿಶೇಷ ವಿಷಯಗಳನ್ನು ತೆರೆದಿಡಲಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದರೆ, ಅಮೀರ್ ಖಾನ್ ಪರಿಶ್ರಮ ಮತ್ತು ಪರಿಪೂರ್ಣತೆಯ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇದೀಗ ಅವರಿಬ್ಬರೂ ತಮ್ಮ ವೃತ್ತಿ ಜೀವನ ಮತ್ತು ವೈಯುಕ್ತಿಕ ಜೀವನದ ಹಲವು ವಿಷಯಗಳನ್ನುತೆರೆದಿಡಲಿದ್ದಾರೆ. (ಎಸ್.ಎಚ್)