ಸುದ್ದಿ ಸಂಕ್ಷಿಪ್ತ

ಅ.5ರಂದು. ಸುಯೋಗ್ ಆಸ್ಪತ್ರೆಯಲ್ಲಿ ನರಶಾಸ್ತ್ರ ವಿಭಾಗಕ್ಕೆ ಚಾಲನೆ

ಮೈಸೂರು,ಅ.4 : ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಬ್ರೈನ್ಸ್ ಸಹಯೋಗದೊಂದಿಗೆ ಅ.5ರಂದು ಬೆಳಗ್ಗೆ 11ಕ್ಕೆ ನರಶಾಸ್ತ್ರ ವಿಭಾಗವನ್ನು ಆರಂಭಿಸಲಾಗುವುದು.

ಕೆನರಾ ಬ್ಯಾಂಕ್ ಅಸಿಸ್ಟಂಟ್ ಜನರಲ್ ಮೇನೇಜರ್ ಕೆ.ಬಿ.ಗೀತಾ ಉದ್ಘಾಟಿಸುವರು, ಪ್ರಜಾವಾಣಿ ಮುಖ್ಯಸ್ಥ ಕೆ.ಜೆ.ಮರಿಯಪ್ಪ ಆಸ್ಪತ್ರೆ ಕಿರುಹೊತ್ತಿಗೆ ಬಿಡುಗಡೆಗೊಳಿಸುವರು, ಡಾ.ಎನ್.ಕೆ.ವೆಂಕಟರಮಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಅನಿಲ್ ಸಾಂಗ್ಲಿ, ಡಾ.ಟಿ.ಎಸ್.ವಾಸನ್ ಭಾಗಿಯಾಗುವರು ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: