ಕರ್ನಾಟಕ

ಮನೆಗಳವು ಆರೋಪಿಗಳ ಬಂಧನ

ರಾಜ್ಯ(ಬೆಂಗಳೂರು)ಅ.4:-  ಮನೆ ಕಳವು, ವಾಹನ ಕಳವು, ಲ್ಯಾಪ್‌ಟಾಪ್ ಕಳವು ಸೇರಿದಂತೆ 25 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಬೇಧಿಸಿರುವ ವೈಟ್‌ಫೀಲ್ಡ್ ಪೊಲೀಸರು 23 ಮಂದಿ ಆರೋಪಿಗಳನ್ನು ಬಂಧಿಸಿ 1 ಕೋಟಿಗೂ ಹೆಚ್ಚಿನ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆ ಕಳವು ಮಾಡಿದ್ದ 1 ಕೆಜಿ ಚಿನ್ನಾಭರಣಗಳನ್ನು  ಕೆಆರ್ ಪುರಂ ಪೊಲೀಸರು ವಶಪಡಿಸಿಕೊಂಡು ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ನಕಲಿ ಕೀ ಬಳಸಿ ಕಳವು ಮಾಡಿ ಮೋಜು ಮಾಡುತ್ತಿದ್ದ ಕಳ್ಳರನ್ನು ಮಹದೇವಪುರ ಪೊಲೀಸರು ಬಂಧಿಸಿ 39 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರೆ, ಕಳವು ಮಾಡಿದ್ದ 7 ಲ್ಯಾಪ್‌ಟಾಪ್‌ಗಳನ್ನು ಕಾಡುಗೋಡಿ ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳವು ಮಾಲುಗಳನ್ನು ವಾರಸುದಾರರಿಗೆ ನೀಡಿದ ಆಯುಕ್ತರು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: