ಮೈಸೂರು

ಯೋಗ ಮತ್ತು ಮನೋರೋಗ ವಿಚಾರ ಸಂಕಿರಣಕ್ಕೆ ಚಾಲನೆ

ಮೈಸೂರು ಉತ್ತನಹಳ್ಳಿಯ ವಿಜಯಗಿರಿ ಭಾರತೀಯೋಗ ಧಾಮದ ಸದ್ವಿದ್ಯಾಭವನದಲ್ಲಿ ನವೆಂಬರ್ 5 ಮತ್ತು 6 ರಂದು ಯೋಗ ಮತ್ತು ಮನೋರೋಗ ಎಂಬ ವಿಷಯದ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಶನಿವಾರ ಚಾಲನೆ ದೊರಕಿದೆ.

ಶನಿವಾರ ವಿಚಾರ ಸಂಕಿರಣಕ್ಕೆ ಒಡೆಯರ್ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅವರ ಧರ್ಮಪತ್ನಿ ತ್ರಿಷಿಕಾದೇವಿ ಸಿಂಗ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಶಿವಮೊಗ್ಗದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಡಾ. ಕೆ.ಎಲ್. ಶಂಕರನಾರಾಯಣ ಜೋಯ್ಸ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇಂದಿನ ಬದುಕನ್ನು ಬಹುವಾಗಿ ಬಾಧಿಸುತ್ತಿರುವ ಮನೋರೋಗದ ಕುರಿತು ಮತ್ತು ಯೋಗದ ಹಿನ್ನೆಲೆಯ ಕುರಿತು ಎರಡು ದಿನಗಳ ಕಾಲ ದಿಗ್ಗಜರಿಂದ ಚಿಂತನೆ ನಡೆಯಲಿದೆ.

Leave a Reply

comments

Related Articles

error: