ಸುದ್ದಿ ಸಂಕ್ಷಿಪ್ತ

ವ್ಯಕ್ತಿ ನಾಪತ್ತೆ; ಪತ್ತೆಗೆ ಮನವಿ

ಸೋಮವಾರಪೇಟೆ, ಅ.4: ತಾಲೂಕಿನ ಕಿರುದಾಲೆ ಗ್ರಾಮದ ನಿವಾಸಿ ಟಿ.ರವಿ(55) ಎಂಬುವರು ಸೆ.30ರಂದು ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಮಂಜುನಾಥ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಂದು ಬೆಳಿಗ್ಗೆ 7.30ರ ಸಮಯದಲ್ಲಿ ಕೂಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಈ ವ್ಯಕ್ತಿ ಕಂಡಲ್ಲಿ ದೂ.ಸಂಖ್ಯೆ08272-229000, 08276-282040, 284840 ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ವರದಿ:ಕೆಸಿಐ, ಎಲ್.ಜಿ)

Leave a Reply

comments

Related Articles

error: