ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಟಾಲಿವುಡ್‍ ಹಾಟ್ ಕಪಲ್

ಹೈದರಾಬಾದ್,ಅ.05: ಟಾಲಿವುಡ್‍ನ ನಾಗಚೈತನ್ಯಾ ಮತ್ತು ಸಮಂತಾ ರುತ್‍ಪ್ರಭು ಹೊಸ ಜೀವನಕ್ಕೆ ಕಾಲಿಡಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಗೋವಾ ಕಡಲ ತೀರದ ಡಬ್ಲ್ಯು ಹೋಟೆಲೊಂದರಲ್ಲಿ ಭರ್ಜರಿಯಾಗಿ ಮದುವೆಯ ಸಿದ್ಧತೆ ನಡೆಯುತ್ತಿದ್ದು, ಶುಕ್ರವಾರ ಹಿಂದು ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ. ತಮ್ಮ ಮದುವೆಗೆ ಎರಡೂ ಕುಟುಂಬದ ಹತ್ತಿರದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಎರಡೂ ಕುಟುಂಬಗಳ 200 ಜನರು ಮಾತ್ರ ಈ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಉತ್ಸವಕ್ಕೆ ಹೆಚ್ಚಿನ ಸಿನಿಮಾ ಗಣ್ಯರು ಉಪಸ್ಥಿತರಿರುವುದಿಲ್ಲ. ಸಂಬಂಧಿತ ಚಿತ್ರಗೋವಾದಲ್ಲಿ ಮದುವೆ ಶಾಸ್ತ್ರಗಳನ್ನು ಮುಗಿಸಿ ಬಂದ ನಂತರ ಹೈದರಾಬಾದ್‍ನಲ್ಲಿ ಈ ಜೋಡಿಯ ಆರತಕ್ಷತೆ ಸಮಾರಂಭವನ್ನು ಮಾಡೋಕೆ ನಿರ್ಧರಿಸಿರುವುದಾಗಿ ಅಕ್ಕಿನೇನಿ ನಾಗಾರ್ಜುನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಧು ಮಗಳಾಗಿರುವ ಸಮಂತ ಅವರು ನಾಗಚೈತನ್ಯ ಅಜ್ಜಿ ನೀಡಿರುವ ಸೀರೆಯನ್ನು ಧರಿಸಲಿದ್ದಾರೆ. ಇದೊಂದು ಅದ್ಧೂರಿ ಮದುವೆಯಾಗಿರದೆ ಸಿಂಪಲ್ ಮದುವೆಯಾಗಿರುತ್ತೆ ಅನ್ನೋದಾಗಿ ನಾಗಾರ್ಜುನ ಕುಟುಂಬ ತಿಳಿಸಿದೆ. ಸಂಬಂಧಿತ ಚಿತ್ರಗೋವಾದಲ್ಲಿ ನಡೆಯುವ ಮದುವೆಯ ವೆಚ್ಚ ಸುಮಾರು 10 ಕೋಟಿ ಎಂದು ಹೇಳಲಾಗುತ್ತಿದೆ. ( ಪಿ.ಜೆ )

Leave a Reply

comments

Related Articles

error: