ಮೈಸೂರು

ರಥೋತ್ಸವ ಸಮಯದಲ್ಲಿ ಜನಜಂಗುಳಿಯ ಮಧ್ಯೆ ನುಗ್ಗಿದ ಭಾರೀ ಗಾತ್ರದ ಗೂಳಿ :ಆತಂಕ ಸೃಷ್ಟಿ

ಮೈಸೂರು,ಅ.5:- ಚಾಮುಂಡೇಶ್ವರಿ ದೇವಿಯ ರಥೋತ್ಸವ ಆರಂಭವಾಗುವ ಸಮಯದಲ್ಲಿ ಜನಜಂಗುಳಿಯ ಮಧ್ಯೆ ಭಾರೀ ಗಾತ್ರದ ಗೂಳಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗುರುವಾರ ನಡೆದಿದೆ.

ಗೂಳಿಯೊಂದು ಜನರ ಗುಂಪಿನ ನಡುವೆ ನುಗ್ಗಿ ಆತಂಕ ಸೃಷ್ಟಿಸಿದೆ. ಗೂಳಿ ನುಗ್ಗಿದ ರಭಸದಿಂದಾಗಿ ಕೆಲವರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು, ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ. ಬಳಿಕ ಜನಜಂಗುಳಿಯನ್ನು ಭೇದಿಸಿಕೊಂಡು ಗೂಳಿ ಕಣ್ಮರೆಯಾಗಿದೆ. ನಂತರ ಯಾವುದೇ ಅಡೆ ತಡೆಗಳಿಲ್ಲದೇ ಚಾಮುಂಡೇಶ್ವರಿಯ ರಥ ಸಾಗಿ ಬಂದಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: