ಸುದ್ದಿ ಸಂಕ್ಷಿಪ್ತ

ಹುಡುಗಿ ನಾಪತ್ತೆ : ಮಾಹಿತಿ ನೀಡಲು ಮನವಿ

ಚಾಮರಾಜನಗರ, ಅ.5: – ನಗರದ ಮಹಿಳಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಸ್ವಾಮಿ ಎಂಬುವರ ಮಗಳಾದ ಎಚ್.ಎಸ್. ಪೂಜಾ ಕಾಣೆಯಾಗಿರುವ ವಿದ್ಯಾರ್ಥಿನಿ. ದುಂಡು ಮುಖ, ಬಿಳಿ ಬಣ್ಣ, ಸಾದಾರಣ ಶರೀರ, ಎಡ ಕಾಲಿನಲ್ಲಿ 6 ಬೆರಳಿದೆ. ಕನ್ನಡ ಮತ್ತು ಇಂಗ್ಲೀಷ್ ಮಾತನಾಡಬಲ್ಲ ಈಕೆ ಕಡು ಕಂದು ಬಣ್ಣದ ಲೆಗಿನ್ಸ್ ಮತ್ತು ತಿಳಿ ಹಳದಿ ಬಣ್ಣದ ಟಾಪ್ ಧರಿಸಿದ್ದಾರೆ. ಈಕೆಯ ಮಾಹಿತಿ ದೊರೆತಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: