ಮೈಸೂರು

ಮಹರ್ಷಿ ವಾಲ್ಮೀಕಿಯವರು ಹಾಕಿಕೊಟ್ಟಿರುವ ಆದರ್ಶಯುತ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕು : ಡಾ.ಎಂ ಚನ್ನಬಸವೇಗೌಡ

ಮೈಸೂರು,ಅ.5:- ಪ್ರತಿಯೊಬ್ಬರೂ ಮಹರ್ಷಿ ವಾಲ್ಮೀಕಿಯವರು ಹಾಕಿಕೊಟ್ಟಿರುವ ಆದರ್ಶಯುತ ಮಾರ್ಗದಲ್ಲಿ ಸಾಗಬೇಕು ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಚನ್ನಬಸವೇಗೌಡ ತಿಳಿಸಿದರು.

ಮಹಾರಾಣಿ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಸಾಂಸ್ಕೃತಿಕವೇದಿಕೆ ವತಿಯಿಂದ ಆಯೋಜಿಸಲಾದ  ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆದಿಕವಿ ವಾಲ್ಮೀಕಿ ಮನಪರಿವರ್ತನವಾದಿ. ಅವರು ರಚಿಸಿರುವ ರಾಮಾಯಣಕ್ಕೆ ಮನಸ್ಸನ್ನು ಪರಿವರ್ತಿಸಬಲ್ಲ ಮಹಾನ್ ಶಕ್ತಿಯಿದೆ. ರಾಮಾಯಣ ಸಮಾಜಸುಧಾರಣೆಯನ್ನು ಮಾಡಲಿದೆ. ರಾಮರಾಜ್ಯದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರೂ ಆದರ್ಶ ಮಾರ್ಗದಲ್ಲಿ ಸಾಗಬೇಕು ಎಂದರು. ವಾಲ್ಮೀಕಿ ಕೇವಲ ದಾರ್ಶನಿಕ ಪುರುಷನಷ್ಟೇ ಅಲ್ಲ. ಮಹಾನ್ ವೇದಾಂತಿ, ತತ್ವಜ್ಞಾನಿ, ಸಮಾಜಸುಧಾರಕ ಎಂದು ತಿಳಿಸಿದರು.

ಇದೇ ವೇಳೆ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಾಗಲಕ್ಷ್ಮೀ ಎನ್. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ವಿಶೇಷ ಪನ್ಯಾಸ ನೀಡಿದರು. ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕಾವ್ಯದ ಆಯ್ದಭಾಗಗಳನ್ನು ಭವತಾರಿಣಿ ಕೆ. ಕಾವ್ಯವಾಚನ ಮಾಡಿದರು. ಈ ಸಂದರ್ಭ ಅಧ್ಯಾಪಕ ಕಾರ್ಯದರ್ಶಿ ಪ್ರೊ.ನಂಜುಂಡಯ್ಯ , ಅಧ್ಯಾಪಕ ಖಜಾಂಚಿ ಪ್ರೊ.ಶೈಲಜಾ ಬಿ.ಎಸ್. ಸೇರಿದಂತೆ ಅಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: