
ಮೈಸೂರು
ಸಿದ್ದಾರ್ಥ ಹೋಟೆಲ್ ನಲ್ಲಿ ಬೆಳಗಿನ ಉಪಹಾರ ಸೇವಿಸಿದ ಯದುವೀರ್
ಮೈಸೂರು,ಅ.5-ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗುರುವಾರ ಚಾಮುಂಡಿಬೆಟ್ಟದಲ್ಲಿ ಮಹಾರಥೋತ್ಸವದಲ್ಲಿ ಭಾಗವಹಿಸಿ ಪುರದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ನಗರದ ಸಿದ್ದಾರ್ಥ ಹೋಟೆಲ್ ಗೆ ತೆರಳಿ ಬೆಳಿಗಿನ ತಿಂಡಿ ಹಾಗೂ ಕಾಫಿ ಸೇವಿಸಿದರು. ಇವರೊಂದಿಗೆ ತಾಯಿ ಪ್ರಮೋದಾದೇವಿ ಒಡೆಯರ್ ಕೂಡ ಇದ್ದರು. (ವರದಿ-ಎಂ.ಎನ್)