ಮೈಸೂರು

ನವೆಂಬರ್ 7 : ಮಹಾರುದ್ರಾಭಿಷೇಕ

ಮೆಟ್ಟಿಲು ಹತ್ತುವ ಬಳಗದ ವತಿಯಿಂದ ಕಾರ್ತಿಕ ಮಾಸದ ಎರಡನೇ ಕಾರ್ತಿಕ ಸೋಮವಾರ (ನ.07) ದಂದು ಚಾಮುಂಡಿ ಬೆಟ್ಟದ ನಂದಿ ದೇವರಿಗೆ  6 ನೇ ವರ್ಷದ ಮಹಾರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಮಹದೇವ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಇದು 6 ನೇ ವರ್ಷದ ಆಚರಣೆಯಾಗಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ 47 ರೀತಿಯ ಫಲ-ಪುಷ್ಪ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ . ನಂತರ ಪ್ರಸಾದ ವಿನಿಯೋಗವಿರುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಸದಸ್ಯರಾದ ಶ್ರೀಧರ್, ಮಹದೇವ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: