ಮೈಸೂರು

ಹೊಟ್ಟೆ ನೋವಿನ ಮಾತ್ರೆ ಬದಲಿಗೆ ಕ್ರಿಮಿನಾಶಕ ಮಾತ್ರೆ ಸೇವನೆ: ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು

ಮೈಸೂರು,ಅ.5-ಹೊಟ್ಟೆನೋವಿನ ಮಾತ್ರೆ ಬದಲಾಗಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಬಸವರಾಜು (೪೦) ಮೃತ ದುರ್ದೈವಿ. ಬಿಳಿಕೆರೆ ಹೋಬಳಿಯ ದೇವಲಾಪುರ ಗ್ರಾಮದ ಬಸವರಾಜ್ ಅ.೩ ರಂದು ಆಕಸ್ಮಿಕವಾಗಿ ಹೊಟ್ಟೆ ನೋವಿನ ಮಾತ್ರೆ ಬದಲಾಗಿ ಕ್ರಿಮಿನಾಶಕ ಮಾತ್ರ ಸೇವಿಸಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಬಸವರಾಜ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: