ಮೈಸೂರು

ವಿದ್ಯುತ್ ಕಂಬಗಳಲ್ಲಿ ಕೇಬಲ್ ವೈರ್ : ಅ.15 ರ ಒಳಗೆ ಸಕ್ರಮಗೊಳಿಸಲು ಕಾಲಾವಕಾಶ

ಮೈಸೂರು, ಅ.5: ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಿಗೆ ಅಕ್ರಮವಾಗಿ ಕೇಬಲ್‍ವೈರ್ ಕಟ್ಟಿಕೊಂಡು ಸಂಪರ್ಕ ಕಲ್ಪಿಸಿಕೊಂಡಿರುವ ಟಿ.ವಿ ಕೇಬಲ್ ನೆಟ್‍ವರ್ಕ್‍ರ್ಕ್ ಮತ್ತು ಬಿಎಸ್‍ಎನ್‍ಎಲ್‍ನವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಮಾಹಿತಿ ನೀಡಿ ನಿಗದಿತ ಶುಲ್ಕ ಪಾವತಿಸಿ ಸಕ್ರಮಗೊಳಿಸುವಂತೆ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

2017ನೇ ಅಕ್ಟೋಬರ್ 15ರ ಒಳಗೆ ಶುಲ್ಕ ಪಾವತಿ ಮಾಡಿ ಸಕ್ರಮಗೊಳಿಸಿಕೊಳ್ಳದ ವಿದ್ಯುತ್ ಕಂಬದ ಮೇಲೆ ಹಾದುಹೋಗಿರುವ ಕೇಬಲ್‍ಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಾಗುವುದು.

ವಿದ್ಯುತ್ ಇಲಾಖೆಯ ಕಂಬಗಳನ್ನು ಉಪಯೋಗಿಸಿಕೊಂಡು ಎಳೆಯಲಾಗಿರುವ ಟಿ.ವಿ.ಕೇಬಲ್ ನೆಟ್‍ವರ್ಕ್‍ ಮತ್ತು ಇಂಟರ್‍ನೆಟ್‍ ನೆಟ್‍ವರ್ಕ್‍, ಕೇಬಲ್ ಹಲವು ಕಡೆ ಜೋತು ಬಿದ್ದು ಅಸುರಕ್ಷತೆಯಿಂದ ಕೂಡಿರುವುದನ್ನು ಗಮನಿಸಲಾಗಿದೆ. ಇದರಿಂದ ವಿದ್ಯುತ್ ಅಪಘಾತ ಹಾಗೂ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಟಿ.ವಿ. ಕೇಬಲ್ ನೆಟ್ವರ್ಕ್‍ ಮತ್ತು ಇಂಟರ್‍ನೆಟ್‍ ಕೇಬಲ್ ಅಳವಡಿಸಿರುವ ಸಂಸ್ಥೆಗಳು ಕುಡಲೇ ತಮ್ಮ ವ್ಯಾಪ್ತಿಯ ಸೆಸ್ಕ್ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ನೋಂದಣಿ ಶುಲ್ಕ ಒಂದು ಸಾವಿರ ರೂ. ಮತ್ತು  ಒಂದು ಬಾರಿಯ ಸಕ್ರಮೀಕರಣ ಶುಲ್ಕ ಪ್ರತಿ ಕಂಬಕ್ಕೆ 200 ರೂ.ಗಳಂತೆ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಕೋರಲಾಗಿದೆ.

2017ನೇ ಅಕ್ಟೋಬರ್ 15 ರ ನಮತರ ಸಕ್ರಮಗೊಳಿಸಿಕೊಳ್ಳದ ವಿದ್ಯುತ್ ಕಂಬದ ಮೇಲೆ ಹಾದುಹೋಗಿರುವ ಕೇಬಲ್‍ಗಳನ್ನು ಇಲಾಖೆ ವತಿಯಿಂದ ತೆರವುಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಮತ್ತು ಕೇಬಲ್ ಸಂಸ್ಥೆಯವರಿಗೆ ಉಂಟಾಗಬಹುದಾದ ತೊಂದರೆಗಳಿಗೆ ಸೆಸ್ಕ್ ಜವಾಬ್ದಾರಿಯಲ್ಲವೆಂದು ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: