ಸುದ್ದಿ ಸಂಕ್ಷಿಪ್ತ
ಭಕ್ತ ಪ್ರಹ್ಲಾದ : ಅ.7ಕ್ಕೆ ಛಾಯಾಚಿತ್ರ ಸ್ಪರ್ಧೆ
ಮೈಸೂರು,ಅ.5 : ಇತ್ತೀಚೆಗೆ ಹೋಟೆಲ್ ಮಾಲೀಕರ ಸಂಘವು ‘ಭಕ್ತ ಪ್ರಹ್ಲಾದ’ ಪೌರಾಣಿಕ ನಾಟಕವನ್ನು ಕಲಾಮಂದಿರದಲ್ಲಿ ಪ್ರದರ್ಶಿಸಿತ್ತು. ಅಂದು ತೆಗೆದ ಛಾಯಾಚಿತ್ರಗಳ ಸ್ಪರ್ಧೆಯನ್ನು ಅ.7ರ ಬೆಳಗ್ಗೆ 10 ರಿಂದ ರಾತ್ರಿ 8ರವರಗೆ ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ಆಯೋಜಿಸಿದೆ.
ಸಾರ್ವಜನಿಕರಿಗಾಗಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಭಾಗವಹಿಸಲ್ಛಿಸುವವರು, ತಾವು ಚಿತ್ರ ತೆಗೆದ ಪೋಟೋಗಳನ್ನು ಅ.6ರ ಸಂಜೆ 4ರೊಳಗೆ ಕೃಷ್ಣಮೂರ್ತಿಪುರಂನಲ್ಲಿರುವ ಸಂಘದ ಕಚೇರಿಗೆ ಛಾಯಾಚಿತ್ರಗಳನ್ನು ತಲುಪಿಸಬಹುದೆಂದು ಕೋರಲಾಗಿದೆ. (ಕೆ.ಎಂ.ಆರ್)