ಮೈಸೂರು

ಭಕ್ತಿ ಭಾವದಿಂದ ಜರುಗಿದ ವರುಣಾದ ವರಕೋಡು ಜಾತ್ರೆ

ಮೈಸೂರಿನ ವರುಣಾ ಕ್ಷೇತ್ರದ ವರಕೂಡು ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಇಲ್ಲಿನ ಬಸವೇಶ್ವರ ದೇಗುಲದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಜಾತ್ರೆಯನ್ನ ಕಣ್ತುಂಬಿಕೊಂಡಿದ್ದಾರೆ. ವರಕೂಡು, ಮೂಡಲಹುಂಡಿ, ಕೆಂಪೇಗೌಡನ ಹಳ್ಳಿ, ಬಡಗಲ ಹುಂಡಿ, ಹೊಸುಂಡಿ, ಸೇರಿದಂತೆ ಒಟ್ಟು 5 ಗ್ರಾಮಗಳೂ ಒಟ್ಟುಗೂಡಿ ನಡೆಯುವ ಈ ಜಾತ್ರೆಯ ನಂತರ ಕೆಂಡ ಹಾಯುವಿಕೆ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೂ ಮುನ್ನ ಗ್ರಾಮದ ದೇವರು ಎಂದೇ ಖ್ಯಾತಿಯಾಗಿರುವ ಬಸವನಿಗೆ ಅಲಂಕಾರ ಮಾಡಿ ಊರಿನೊಳಗೆ ಮೆರವಣಿಗೆ ಮಾಡಲಾಗುತ್ತೆ. ಈ ವೇಳೆ ಗ್ರಾಮಸ್ಥರು ಬಸವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೀಗೆ ಸಾಗುವ ಬಸವ, 5 ಗ್ರಾಮಕ್ಕೂ ತೆರಳಿ ಗ್ರಾಮಸ್ಥರಿಗೆ ದರ್ಶನ ಭಾಗ್ಯ ನೀಡುತ್ತದೆ. ಈ ರೀತಿಯ ಮೆರವಣಿಗೆಯಿಂದ ಗ್ರಾಮದಲ್ಲಿ ಶಾಂತಿ ನೆಲೆಸಿ ಎಲ್ಲರೂ ಸುಖ-ಸಂತಸದಿಂದ ಇರ್ತಾರೆ ಎಂಬುದು ನಂಬಿಕೆ.

jaatre-new-web

ಪುಣ್ಯವಂತರಿಗೆ ಮಾತ್ರ ಬಸವನನ್ನ ಮುಟ್ಟುವ ಯೋಗವಂತೆ…

whatsapp-image-2016-11-04-at-4-46-08-pm
ಮಹೇಶ್

ಅಲಂಕಾರ ಮಾಡಿಕೊಂಡು ಗ್ರಾಮಸ್ಥರಿಗೆ ದರ್ಶನ ನೀಡುವ ಬಸವ, ಪುಣ್ಯವಂತರಿಗೆ ಮಾತ್ರ ತನ್ನನ್ನು ಮುಟ್ಟುವ ಅವಕಾಶ ಕಲ್ಪಿಸುತ್ತಾನೆಂಬ ನಂಬಿಕೆ ಇದೆ. ಅದೇ ರೀತಿ ಬಸವನಿಗೆ ಯಾರು ಇಷ್ಟವಿಲ್ಲವೋ? ಅಂತವರನ್ನ ಮುಟ್ಟಿಸಿಕೊಳ್ಳದೆ ಮುಂದೆ ಸಾಗುತ್ತಾನಂತೆ. ಪುಣ್ಯ ಮಾಡಿದವರಿಗೆ ಬಸವ ತಾನೂ ಕಾಲು ಮುಟ್ಟಲು ಅವಕಾಶ ಕೊಡುತ್ತಾನೆ. ಇದು ಸತ್ಯವೂ ಹೌದು ಅಂತಾರೆ ಗ್ರಾಮದ ಹಿರಿಯರು ಹಾಗೂ ಗೌಡರಾದ ವರಕೂಡು ಮಹದೇವು ಅವರು.

ಇನ್ನೂ ಗ್ರಾಮದಲ್ಲಿ ಪೂಜೆ ಪುನಸ್ಕಾರವಾದ ನಂತರ ಕೊಂಡ ಹಾಯುವಿಕೆಯೂ ನಡೆಯುತ್ತದೆ. ಮಾತ್ರವಲ್ಲ ಮೂಢನಂಬಿಕೆಯ ಪ್ರತಿಬಿಂಬ ಎನ್ನುವಂತೆ ಬಾಯಿಗೆ ಬೀಗ ಹಾಕಿಕೊಳ್ಳುವಿಕೆಯೂ ಕೂಡ ಸಿಎಂ ತವರು ಜಿಲ್ಲೆಯಲ್ಲೇ ಇಂದಿಗೂ ಜೀವಂತವಾಗಿದೆ. ಆದರೆ ಗ್ರಾಮದ ವಿದ್ಯಾವಂತ ಯುವಕ ಹೇಳೋದೇ ಬೇರೆ. ಸರ್ ಇದು ನಮ್ಮ ನಂಬಿಕೆ ಹಾಗೂ ಆಚರಣೆ. ನಾಡಹಬ್ಬ ದಸರೆಯನ್ನ ನಾಡಹಬ್ಬ ಎಂದು ಆಚರಿಸುತ್ತೇವೆ. ಈ ಹಬ್ಬವನ್ನ ನಾವು ಗ್ರಾಮಹಬ್ಬ ಎಂದೇ ಆಚರಿಸುತ್ತೇವೆ. ಇದನ್ನ ಮೂಡನಂಬಿಕೆ ಎನ್ನಲು ಸಾಧ್ಯವಿಲ್ಲ ಅಂತಾರೆ ವರಕೂಡಿನ ಮಹೇಶ್.

~ ಸುರೇಶ್ ಎನ್.

Leave a Reply

comments

Related Articles

error: