ಮೈಸೂರು

ಶಾಸ್ತ್ರೀಯ ಸಂಗೀಯವನ್ನು ಎಲ್ಲಾ ವರ್ಗದವರೂ ಕಲಿಯಬೇಕು: ಸರ್ವಮಂಗಳ ಶಂಕರ್

ಮೈಸೂರು, ಅ.೫: ಕರ್ನಾಟಕ ಗಾನ ಕಲಾ ಪರಿಷತ್ತು ಹಾಗೂ ಅವಧೂತ ದತ್ತ ಪೀಠ ಗಣಪತಿ ಸಚ್ಚಿದಾನಂಶ್ರಮ ಸಹಭಾಗಿತ್ವದಲ್ಲಿ ಆಯೋಜಿಸಿರುವ ೪೮ ಹಿರಿಯ ಸಂಗೀತ ವಿದ್ವಾಂಸರ ಹಾಗೂ ೩೦ನೇ ಯುವ ಸಂಗೀತ ವಿದ್ವಾಂಸರ ರಾಜ್ಯಮಟ್ಟದ ಸಮ್ಮೇಳನದ ೨ನೇ ದಿನವಾದ ಗುರುವಾರ ವಿದ್ವತ್ ಗೋಷ್ಠಿ ನಡೆಯಿತು.
ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಆಯೋಜಿಸಿರುವ ಗೋಷ್ಠಿಯನ್ನು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಡಾ.ಸರ್ವಮಂಗಳ ಶಂಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲೆ ಮನುಷ್ಯನ ನಿಜವಾದ ಆಸ್ತಿ. ಸಂಗೀತ ಜೀವನಕ್ಕೆ ನವಚೈತನ್ಯ ನೀಡಲಿದ್ದು, ಶಾಸ್ತ್ರೀಯ ಕಲೆಗಳನ್ನು ಎಲ್ಲ ವರ್ಗದವರು ಕಲಿಯುವಂತಾಗಬೇಕು. ಯಾವುದೇ ಭೇದ ವಿಲ್ಲದೆ ಸಂಗೀತವನ್ನು ಎಲ್ಲಾ ವರ್ಗದವರು ಕಲಿಯಬೇಕು. ವಿದ್ಯಾರ್ಥಿಗಳು ಆಧುನಿಕತೆಯೊಂದಿಗೆ ಶಾಸ್ತ್ರೀಯ ಸಂಗೀತವನ್ನೂ ಕಲಿಯಬೇಕು. ನಮ್ಮ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಶಾಸ್ತ್ರೀಯ ಕಲೆಗಳನ್ನು ಎಲ್ಲಾ ವರ್ಗದವರು ಕಲಿಯುವಂತಾಗಬೇಕು ಎಂದು ಹೇಳಿದರು.
ಇದೇ ವೇಳೆ ಅತಂತ್ಯ ಕ್ಲಿಷ್ಟಕರ ಸಿಂಹನಂದನ ತಾಳ ಪಲ್ಲವಿ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಬೆಂಗಳೂರಿನ ವಿದುಷಿ ವೀಣಾ ಮೋಹನ್ ಸಿಂಹನಂದನ ತಾಳ ಪಲ್ಲವಿ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷೆ ವಿದುಷಿ ಟಿ.ಎಸ್.ವಸಂತ ಮಾಧವಿ, ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ಟಿ.ಎಸ್.ಪಟ್ಟಾಭಿರಾಮ ಪಂಡಿತ್, ಕರ್ನಾಟಕ ಗಾನ ಕಲಾ ಪರಿಷತ್ ಅಧ್ಯಕ್ಷ ವಿದ್ವಾನ್ ಆರ್.ಕೆ.ಪದ್ಮನಾಭ, ವಿದುಷಿ ಡಾ.ಆರ್.ಎನ್.ಶ್ರೀ ಲತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: