ಮೈಸೂರು

ಕಾರಿಗಾಗಿ ಎಂಟೆಕ್ ಪದವೀಧರೆ ಪತ್ನಿಯನ್ನೇ ಕೊಲೆಗೈದ ಪತಿರಾಯ..?

ಮೈಸೂರು,ಅ.6:-  ಕಾರನ್ನು ತರುವಂತೆ ಒತ್ತಾಯಿಸಿ,ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಆಕೆಯ ಪತಿಯೇ ಕೊಲೆಗೈದ ಘಟನೆ ಮೈಸೂರು ಜಿಲ್ಲೆ ರಂಗಯ್ಯನ ಕೊಪ್ಪಲಿನಲ್ಲಿ ನಡೆದಿದೆ.

ಮೃತಳನ್ನು ತೇಜಸ್ವಿನಿ ಎಂದು ಹೇಳಲಾಗಿದೆ. 11 ತಿಂಗಳ ಹಿಂದಷ್ಟೇ ಹೆಚ್.ಡಿ.ಕೋಟೆ ತಾಲೂಕಿನ ತೇಜಸ್ವಿನಿಗೆ ಹುಣಸೂರು ತಾಲೂಕು ರಂಗಯ್ಯನ ಕೊಪ್ಪಲು ರಾಘವೇಂದ್ರ ಜೊತೆ ವಿವಾಹ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ನೀಡಿದ್ದರೂ ರಾಘವೇಂದ್ರ ನಿಗೆ ವರದಕ್ಷಿಣೆ ದಾಹ ತೀರಿರಲಿಲ್ಲ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ವರದಕ್ಷಿಣೆ ತರದಿರುವುದರಿಂದ ತೇಜಸ್ವಿನಿಗೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತೇಜಸ್ವಿನಿಯನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತೇಜಸ್ವಿನಿ ಗುರುವಾರ ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ತೇಜಸ್ವಿನಿ ಪೋಷಕರಿಂದ ಕೊಲೆ ಆರೋಪ ಕೇಳಿ ಬಂದಿದ್ದು, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ಕಾರಿಗಾಗಿ ಎಂಟೆಕ್ ಪದವೀಧರೆ ಪತ್ನಿಯನ್ನೇ ಕೊಲೆಗೈದಿದ್ದಾನೆ. ಪತ್ನಿಯನ್ನು ಕೊಂದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ ಎನ್ನಲಾಗಿದೆ. ಜಾರಿ ಬಿದ್ದು ಗಾಯ ಎಂದು ಹೇಳಿ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದ.  ತೇಜಸ್ವಿನಿ ಪತಿ ರಾಘವೇಂದ್ರಗೆ ಹುಣಸೂರು ಎಂ ಎಲ್ ಎ ಶ್ರೀರಕ್ಷೆ ನೀಡಿದ್ದಾರೆ ಎನ್ನಲಾಗುತ್ತಿದೆ.  ಶಾಸಕರ ವಿರುದ್ಧ ಮೃತ ತೇಜಸ್ವಿನಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾ.ಪಂ.ಉಪಾಧ್ಯಕ್ಷ ನರಸಿಂಹೇಗೌಡ ತಮ್ಮ ಮಗಳನ್ನು  20 ಲಕ್ಷ ಖರ್ಚು ಮಾಡಿ ಹನ್ನೊಂದು ತಿಂಗಳ ಹಿಂದಷ್ಟೇ ವಿವಾಹ ಮಾಡಿಕೊಟ್ಟಿದ್ದರು. ವ್ಯವಸಾಯ ಮಾಡೋ ವ್ಯಕ್ತಿಯನ್ನೇ ಮದುವೆಯಾಗೋದಾಗಿ ಹೇಳಿ ತೇಜಸ್ವಿನಿಯನ್ನು ರಾಘವೇಂದ್ರನ ಕೈ ಹಿಡಿದಿದ್ದಳು.ಕೇವಲ ಕಾರಿಗಾಗಿ ಪತ್ನಿಯನ್ನೇ ಕೊಲೆಗೈದಿದ್ದಾನೆ. ಸಾವಿಗೆ ನ್ಯಾಯ ಸಿಗುವವರೆಗೂ ಶವ ಕೊಂಡೊಯ್ಯಲ್ಲ ಎಂದು ತೇಜಸ್ವಿನಿ ಪೋಷಕರು ಹೇಳುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: