ಮೈಸೂರು

ಸಿಡಿಲು ಬಡಿದು ನಾಲ್ವರಿಗೆ ಗಾಯ

ಮೈಸೂರು(ಪಿರಿಯಾಪಟ್ಟಣ)ಅ.6:-  ಸಿಡಿಲು ಬಡಿದು ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನಂದಿನಾಥಪುರ ಸಮೀಪದ ವೆಂಕಟೇಶ್ವರ ಹ್ಯಾಚರೀಸ್ ಬಳಿ ಇರುವ ಚಿಕ್ಕಮ್ಮ ದೊಡ್ಡಮ್ಮ ದೇವಾಲಯದಲ್ಲಿ ಗುರುವಾರ  ಮಧ್ಯಾಹ್ನ ನಡೆದಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಹುಣಸವಾಡಿ ಗ್ರಾಮದ ಪುಟ್ಟಣ್ಣಯ್ಯ ಬಿನ್ ಸಣ್ಣೇಗೌಡ(60), ಸುವರ್ಣಮ್ಮ ಕೋಂ ಸುರೇಂದ್ರ(45), ಸುಜಯ್ ಬಿನ್ ನಟರಾಜು(23) ಸುದೀಪ್ ಬಿನ್ ಮಹದೇವ(18) ತಿಮ್ಮೇಗೌಡಬಿನ್ ಪುಟ್ಟೇಗೌಡ(60) ಉಮೇಶ ಬಿನ್ ಶ್ರೀನಿವಾಸ(24) ಎಂದು ಗುರುತಿಸಲಾಗಿತ್ತು. ಇದೇ ವೇಳೆ ಗಣೇಶ, ವಿಶ್ವ, ಮಾದೇಶ ಎಂಬುವವರು ಸಿಡಿಲಿನ ತೀವ್ರತೆಗೆ ಗಾಯಗೊಂಡಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ದನ ಮೇಯಿಸುವ ಸಲುವಾಗಿ ಸ್ಥಳಕ್ಕೆ ತೆರಳಿದ್ದು, ಮಧ್ಯಾಹ್ನ 12.30 ಸಮಯದಲ್ಲಿ ಬಾರಿ ಮಳೆ ಬಂದಿದ್ದರಿಂದ ಆ ಸಂದರ್ಭದಲ್ಲಿ ಮೈದಾನದಲ್ಲಿದ್ದ ದೇವಾಲಯದಲ್ಲಿ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ.  ಘಟನೆ ಬಗ್ಗೆ ಕೂಡಲೆ ಮೊಬೈಲ್ ಮೂಲಕ ಸಂದೇಶ ಬಂದಿದ್ದರಿಂದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಗಾಯಾಳು ಹಾಗೂ ಮೃತರನ್ನು ಕಂಡು ಆಘಾತಗೊಂಡರು. ಮೃತರ ಶವಗಳನ್ನು ಟ್ರಾಕ್ಟರ್ ಹಾಗೂ ಪೊಲೀಸ್ ಜೀಪ್‍ನಲ್ಲಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು.

ಎಸ್‍ಪಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದ ಪಿಎಸ್‍ಐ ಎಸ್.ಎಸ್.ರವಿಕಿರಣ್ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೇ ಅಲ್ಲದೇ ಕೂಡಲೆ ತಮ್ಮ ಜೀಪ್‍ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಆಸ್ಪತ್ರೆಯ ಬಳಿ ಸುದ್ದಿ ತಿಳಿದು ಸಾವಿರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ಜನರನ್ನು ನಿಯಂತ್ರಿಸಿ ಸರತಿ ಸಾಲಿನಲ್ಲಿ ನಿಂತು ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: